ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರನ್‌ ಭಾಷಣ: ದೇಶದ ಯಾವುದೇ ಭಾಗದ ಜನರನ್ನು ನಾವು ಗೌರವಿಸಬೇಕು– ತೇಜಸ್ವಿ ಯಾದವ್

Published 25 ಡಿಸೆಂಬರ್ 2023, 2:48 IST
Last Updated 25 ಡಿಸೆಂಬರ್ 2023, 2:48 IST
ಅಕ್ಷರ ಗಾತ್ರ

ಪಟ್ನಾ: ಯಾರೇ ಆಗಲಿ ಬಿಹಾರ ಮತ್ತು ಉತ್ತರಪ್ರದೇಶದ ಸಂಪೂರ್ಣ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಆರ್‌ಜೆಡಿ ನಾಯಕ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಮಾರನ್ ಅವರು ಜಾತಿ ಪದ್ಧತಿಯಿಂದಾಗಿ ತುಂಬಿರುವ ಅನ್ಯಾಯಗಳನ್ನು ಮತ್ತು ಕೆಲವು ಸಮುದಾಯದ ಜನರನ್ನು ಮಾತ್ರ ಇಂತಹ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿರುವುದನ್ನು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದ್ದರೆ ಅದು ಅರ್ಥಪೂರ್ಣ. ಆದರೆ, ಬಿಹಾರ ಮತ್ತು ಉತ್ತರಪ್ರದೇಶದ ಸಂಪೂರ್ಣ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.  

‘ದೇಶದ ಯಾವುದೇ ಭಾಗದಿಂದ ಬರುವ ಜನರನ್ನು ನಾವು ಗೌರವಿಸಬೇಕು. ನಾವು ಡಿಎಂಕೆಯನ್ನು ನಮ್ಮಂತೆಯೇ ಸಾಮಾಜಿಕ ನ್ಯಾಯದ ಆದರ್ಶ ಪಾಲಿಸುವ ಪಕ್ಷವಾಗಿ ನೋಡುತ್ತೇವೆ. ಆ ಪಕ್ಷದ ನಾಯಕರು ಈ ಆದರ್ಶಕ್ಕೆ ವಿರುದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಯಾದವ್ ಹೇಳಿದ್ದಾರೆ.

ಕೇವಲ ಹಿಂದಿ ಮಾತನಾಡುವ ಉತ್ತರಪ್ರದೇಶ ಮತ್ತು ಬಿಹಾರದ ಜನರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯುವ ಮತ್ತು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ, ಇಲ್ಲಿನ ಯುವಜನರು ಇಂಗ್ಲಿಷ್‌ ಪ್ರೌಢಿಮೆಯಿಂದ  ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು 2019ರಲ್ಲಿ ಮಾಡಿರುವ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ದಯಾನಿಧಿ ಮಾರನ್‌ ಅವರ ಈ ಭಾಷಣ ಈಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಬಗ್ಗೆ ಬಿಜೆಪಿ ಮಾತ್ರವಲ್ಲ, ‘ಇಂಡಿಯಾ’ ಮೈತ್ರಿಕೂಟದ ಭಾಗವೂ ಆಗಿರುವ ಬಿಹಾರದ ಆಡಳಿತಾರೂಢ ಪಕ್ಷ ಆರ್‌ಜೆಡಿ, ಮಾರನ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT