ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’ ನೌಕೆಯನ್ನು ಸೇರ್ಪಡೆಗೊಳಿಸುವ ಸಮಾರಂಭದಲ್ಲಿ ಭಾಗಿಯಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯ ಮಹಿಳಾ ಅಧಿಕಾರಿಗೆ ಹಸ್ತಲಾಘವ ನೀಡಿದರು
ಪಿಟಿಐ ಚಿತ್ರ
ಮಾಲಿನ್ಯ ನಿಯಂತ್ರಣ ನೌಕೆ
ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿರುವ ಮಾಲಿನ್ಯ ನಿಯಂತ್ರಣ ನೌಕೆ ‘ಸಮುದ್ರ ಪ್ರತಾಪ್’. 114.5 ಮೀಟರ್ ಉದ್ದವಿರುವ 4200 ಟನ್ ತೂಕದ ಈ ಹಡಗು ಗಂಟೆಗೆ 22 ನಾಟಿಕಲ್ ಮೈಲಿ ವೇಗದಲ್ಲಿ ಚಲಿಸಲಿದ್ದು 6 ಸಾವಿರ ನಾಟಿಕಲ್ ಮೈಲಿ ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಕಡಲ ಮಾಲಿನ್ಯ ನಿಯಂತ್ರಣ ನಿಯಮಗಳು ಕಡಲ ಕಾನೂನು ಜಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಸೇರಿದಂತೆ ವಿಶೇಷ ಆರ್ಥಿಕ ವಲಯವನ್ನು (ಇಇಝೆಡ್) ರಕ್ಷಿಸುವಲ್ಲಿ ಈ ಹಡಗು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಡಿಐಜಿ ಅಶೋಕ್ ಕುಮಾರ್ ಭಾಮಾ ನೇತೃತ್ವದಲ್ಲಿ ಕೊಚ್ಚಿಯಲ್ಲಿ ನೆಲೆಗೊಳ್ಳಲಿರುವ ಈ ನೌಕೆಯಲ್ಲಿ 14 ಅಧಿಕಾರಿಗಳು 115 ಸಿಬ್ಬಂದಿ ಇದ್ದಾರೆ. ಇವರಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳೂ ಇದ್ದಾರೆ.