ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಘಾಲಯ; ಮಳೆ ನೀರು ಸಂಗ್ರಹ, ಸುಸ್ಥಿರತೆಗೆ ಕ್ರಮ

Published 9 ನವೆಂಬರ್ 2023, 10:42 IST
Last Updated 9 ನವೆಂಬರ್ 2023, 10:42 IST
ಅಕ್ಷರ ಗಾತ್ರ

ಶಿಲ್ಲಾಂಗ್: ಮೇಘಾಲಯದಲ್ಲಿ ವಾರ್ಷಿಕ ಮಳೆಯಿಂದಾಗಿ ಸುಮಾರು 63 ಬಿಲಿಯನ್‌ ಕ್ಯೂಬಿಕ್‌ ಲೀಟರ್ ನೀರು ಹರಿದುಬರಲಿದ್ದು, ಈ ಪೈಕಿ ರಾಜ್ಯವು ಕೇವಲ 1 ಬಿಲಿಯನ್‌ ಕ್ಯೂಬಿಕ್‌ ಲೀಟರ್ ನೀರನ್ನು ಮಾತ್ರವೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.

ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಮೇಘಾಲಯ ವಾಟರ್‌ ಸ್ಮಾರ್ಟ್ ಕಿಡ್ ಯೋಜನೆಗೆ ಚಾಲನೆ ನೀಡಿ ಅವರು ಈ ಮಾತು ಹೇಳಿದರು. ಮಕ್ಕಳಲ್ಲಿ ನೀರು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಮೇಘಾಲಯವು ಭೂಮಂಡಲದಲ್ಲಿಯೇ ಅತ್ಯಂತ ತೇವಯುಕ್ತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುರಿಯುವ ಒಟ್ಟು ಮಳೆ ಪ್ರಮಾಣದಲ್ಲಿ ಸುಮಾರು 31 ಬಿಲಿಯನ್‌ ಕ್ಯೂಬಿಕ್‌ ಲೀಟರ್‌ ನೀರು ಬಾಂಗ್ಲಾದೇಶಕ್ಕೆ ಹರಿದುಹೋದರೆ, ಅಷ್ಟೇ ಪ್ರಮಾಣದ ನೀರು ಅಸ್ಸಾಂಗೆ ಹರಿದುಹೋಗಲಿದೆ ಎಂದು ತಿಳಿಸಿದರು.

ನೀರು ಸಂರಕ್ಷಣೆ ಮತ್ತು ಸುಸ್ಥಿರಾಭಿವೃದ್ಧಿಗೆ ಒತ್ತು ನೀಡಲು ಕೇಂದ್ರ ಜಲ ಸಚಿವಾಲಯದ ವಿವಿಧ ಕಾರ್ಯಕ್ರಮಗಳ ನೆರವಿನಲ್ಲಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ರಾಜ್ಯದಲ್ಲಿ 1000 ಜಲಸಂಗ್ರಹಾಗಾರಗಳನ್ನು ನಿರ್ಮಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ನೀರು ಸಂರಕ್ಷಣೆಗೆ ಪ್ರಯತ್ನ ನಡೆಸುತ್ತಿದ್ದು, ಜಲಸುಸ್ಥಿರತೆ ಮತ್ತು ಜಲಮೂಲಗಳ ಮರುಪೂರಿಕರಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ಇಲಾಖೆಗೆ ಜಲಜೀವನ್ ಮಿಷನ್ ಮತ್ತು ಇಎಪಿ ಯೋಜನೆಯಡಿ ಸುಮಾರು 8000 ಕೋಟಿ ರೂಪಾಯಿ ನೆರವು ಬಂದಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT