ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ನಾ: ಎಲ್‌ಜೆಪಿ ಸಂಸದ ಕೈಸರ್ ಆರ್‌ಜೆಡಿಗೆ

Published 21 ಏಪ್ರಿಲ್ 2024, 15:34 IST
Last Updated 21 ಏಪ್ರಿಲ್ 2024, 15:34 IST
ಅಕ್ಷರ ಗಾತ್ರ

ಪಟ್ನಾ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದ ಹಾಗೂ ಬಿಹಾರದಲ್ಲಿನ ಎನ್‌ಡಿಎ ಕೂಟದ ಏಕೈಕ ಮುಸ್ಲಿಂ ಸಂಸದ ಮೆಹಬೂದ್‌ ಅಲಿ ಕೈಸರ್‌ ಅವರು ಭಾನುವಾರ ಆರ್‌ಜೆಡಿಗೆ ಸೇರ್ಪಡೆಗೊಂಡರು.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಮೆಹಬೂಬ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಎಲ್‌ಜೆಪಿಯು ಇವರಿಗೆ ಟಿಕೆಟ್ ನಿರಾಕರಿಸಿತ್ತು.

ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರನ್ನು ಭೇಟಿಯಾದ ಬಳಿಕ ಮೆಹಬೂಬ್‌ ಅವರು ಪಕ್ಷಕ್ಕೆ ಸೇರಿದರು. ಇದರಿಂದ ಸಂವಿಧಾನ ರಕ್ಷಣೆಗಾಗಿ ನಾವು ನಡೆಸುತ್ತಿರುವ ಹೋರಾಟಕ್ಕೆ ಬಲ ಬಂದಿದೆ ಎಂದು ತೇಜಸ್ವಿ ಯಾದವ್‌ ಹೇಳಿದರು. 2014ರಲ್ಲಿ ಮೆಹಬೂಬ್‌ ಅವರು ಕಾಂಗ್ರೆಸ್‌ ತೊರೆದು ಎಲ್‌ಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT