ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ಮಾನಸಿಕ ಅಸ್ವಸ್ಥ ಬಾಲಕ ಪಾಕ್‌ಗೆ ಹಸ್ತಾಂತರ

Published 14 ಅಕ್ಟೋಬರ್ 2023, 14:45 IST
Last Updated 14 ಅಕ್ಟೋಬರ್ 2023, 14:45 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ‘ಗಡಿ ದಾಟಿ ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಸಂದರ್ಭ ಬಂಧಿಸಲಾಗಿದ್ದ ಮಾನಸಿಕ ಅಸ್ವಸ್ಥ ಬಾಲಕನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಎಲ್‌ಒಸಿ ಮೂಲಕ ಪಾಕಿಸ್ತಾನದ ಅಧಿಕಾರಿಗಳಿಗೆ ಶನಿವಾರ ಹಸ್ತಾಂತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಇರ್ಷಾದ್‌ ಅಹ್ಮದ್‌ ಎಂಬ ಬಾಲಕ ದೇಶಕ್ಕೆ ಪ್ರವೇಶಿಸಲು ಶುಕ್ರವಾರ ಯತ್ನಿಸಿದ್ದ. ಶನಿವಾರ ಮಧ್ಯಾಹ್ನದ ವೇಳೆ ಚಕನ್‌ ದಾ ಬಾಗ್‌ ಗಡಿ ಮೂಲಕ ಪಾಕಿಸ್ತಾನ ಸೇನಾಧಿಕಾರಿಗಳಿಗೆ ಬಾಲಕನನ್ನು ಒಪ್ಪಿಸಲಾಗಿದೆ’ ಎಂದರು.

‘ಬಾಲಕನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ವೇಳೆ ಪೂಂಛ್‌ ಮತ್ತು ಪಿಒಕೆಯ ನಾಗರಿಕ ಅಧಿಕಾರಿಗಳು ಸ್ಥಳದಲ್ಲಿದ್ದರು’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT