ತಿರುವನಂತಪುರ: ಈ ಹಿಂದೆಯೇ ರಾಜ್ಯ ಸರ್ಕಾರ ಘೋಷಿಸಿದ ಪ್ರಕಾರ ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ರಾಜ್ಯಕ್ಕೆ ಭೇಟಿ ನೀಡುವುದು ಖಚಿತ. ಅವರಿಗೆ ಪ್ರಾಯೋಜಕರು ಪಂದ್ಯದ ಸಂಭಾವನೆಯನ್ನೂ ನೀಡಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಇದೇ ವರ್ಷದ ಅಕ್ಟೋಬರ್– ನವೆಂಬರ್ ತಿಂಗಳಲ್ಲಿ ಅರ್ಜೆಂಟೀನಾ ತಂಡ ಬರುವ ಸಾಧ್ಯತೆಯಿದೆ. ಅವರನ್ನು ರಾಜ್ಯದ ಅತಿಥಿಗಳು ಎಂದು ಆದರಿಸಲಾಗುವುದು. ಅವರ ಭದ್ರತೆ, ವಾಸ್ತವ್ಯ ಮತ್ತು ಇತರ ವ್ಯವಸ್ಥೆಗಳನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಾಯೋಜಕರು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ಕಾರಣಕ್ಕೆ ಅರ್ಜೆಂಟೀನಾ ತಂಡ ತನ್ನ ನಿಗದಿ ಪ್ರವಾಸವನ್ನು ರದ್ದುಗೊಳಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಆದರೆ ಅಬ್ದುರಹಿಮನ್ ಮತ್ತು ಪ್ರಾಯೋಜಕರರಾದ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಪತ್ರಿಕಾ ವರದಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ವಿಶ್ವ ಚಾಂಪಿಯನ್ ತಂಡವು ರಾಜ್ಯದಲ್ಲಿ ಸೌಹಾರ್ದ ಪಂದ್ಯ ಆಡಲಿದೆ ಎಂದು ಪುನರುಚ್ಛರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.