ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ‍ ಪ್ರದೇಶದ ಬಿಜೆಪಿ ನಾಯಕಿ ಮಗನ ಮೇಲೆ ಕಚ್ಚಾ ಬಾಂಬ್‌ ಎಸೆದ ದುಷ್ಕರ್ಮಿಗಳು

Last Updated 7 ಏಪ್ರಿಲ್ 2023, 10:29 IST
ಅಕ್ಷರ ಗಾತ್ರ

ಉತ್ತರ ಪ್ರದೇಶ : ಸ್ಥಳೀಯ ಬಿಜೆಪಿ ನಾಯಕಿಯ ಮಗನ ಮೇಲೆ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್‌ ಎಸೆದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜನ ಜೂನ್ಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಥಳೀಯ ಬಿಜೆಪಿ ನಾಯಕಿ ವಿಜಯಲಕ್ಷ್ಮೀ ಚಂದೇಲ್ ಮಗ ವಿಧಾನ್‌ ಸಿಂಗ್‌(20) ಮೇಲೆ ಕಚ್ಚಾ ಬಾಂಬ್‌ ಎಸಯಲಾಗಿದೆ ಎಂದು ತಿಳಿದುಬಂದಿದೆ. ವಿಧಾನ್‌ ಸಿಂಗ್‌ ಕಾರಿನಲ್ಲಿ ಕುಳಿತಿರುವ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ಕಚ್ಚಾ ಬಾಂಬ್‌ ಎಸೆದು ಪರಾರಿಯಾಗಿದ್ದಾರೆ.

ಸಂಭವನೀಯ ಅಪಾಯದಿಂದ ವಿಧಾನ್‌ ಸಿಂಗ್‌ ಪಾರಾಗಿದ್ದು, ಕಚ್ಚಾ ಬಾಂಬ್‌ ಎಸೆದ ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಎರಡು ದ್ವಿಚಕ್ರ ವಾಹನದಲ್ಲಿ ಬಂದ ಯುವಕರುಗಳು ಈ ಕೆಲಸ ನಡೆಸಿದ್ದಾರೆ.ಕಚ್ಚಾ ಬಾಂಬ್‌ ಎಸೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಕೃತ್ಯ ನಡೆಸಿದವರ ಬಗ್ಗೆ ಈವರೆಗೆ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಶಿವಂ ಯಾದವ್‌ ಎಂಬುವವರು ಮತ್ತು ಆತನ ಸಹಚರರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ‘ ಎಂದು ಜೂನ್ಸಿ ಪೊಲೀಸ್‌ ಠಾಣೆಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT