ನವದೆಹಲಿ: ದೆಹಲಿಯ ಆಮ್ ಆದ್ಮಿ ಸರ್ಕಾರ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಲ್ಲಿ ಶೇ.150 ಏರಿಕೆ ಮಾಡಿದೆ. ಈ ಮೂಲಕ ₹4 ಕೋಟಿಯಿದ್ದ ಪ್ರಾದೇಶಿಕ ಅಭಿವೃದ್ಧಿ ನಿಧಿ ₹10 ಕೋಟಿ ಆಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಏತನ್ಮಧ್ಯೆ,ಈಗಿರುವ ಅನುದಾನವನ್ನು ಸರಿಯಾಗಿ ಬಳಸದ ಶಾಸಕರಿಗೆ ಇಷ್ಟೊಂದು ಅನುದಾನ ನೀಡುವ ಅಗತ್ಯವಿದೆಯೇ ಎಂದು ವಿಪಕ್ಷಗಳು ಪ್ರಶ್ನಿಸಿವೆ.

ಆದರೆ ಶಾಸಕರು ಜನರಿಗೆ ತುಂಬಾ ಹತ್ತಿರವಾಗುವ ಜನ ಪ್ರತಿನಿಧಿಗಳಾಗಿದ್ದು, ಜನರು ಚಿಕ್ಕ ಪುಟ್ಟ ಕಾರ್ಯಕ್ಕೂ ಇವರನ್ನೇ ಸಂಪರ್ಕಿಸುತ್ತಾರೆ. ಅಗತ್ಯ ಫಂಡ್ ಇದ್ದರೆ ಮಾತ್ರ ಜನರಿಗೆ ಸಹಾಯ ಮಾಡಲು ಸಾದ್ಯ ಎಂದಿದ್ದಾರೆ ಕೇಜ್ರಿವಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.