ಕೊಯಮತ್ತೂರು: ಆಹ್ವಾನ ಬಂದರೆ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷ ಕೇಂದ್ರದಲ್ಲಿ ಬಿಜೆಪಿ ವಿರುದ್ಧದ ವಿರೋಧಪಕ್ಷಗಳ ಮೈತ್ರಿಕೂಟ ಸೇರಲಿದೆ ಎಂದು ಎಂಎನ್‌ಎಂ ಅಧ್ಯಕ್ಷ ಕಮಲ್ ಹಾಸನ್ ತಿಳಿಸಿದ್ದಾರೆ.

ಈಗಿನ ಪರಿಸ್ಥಿತಿ ಮತ್ತು ಆಹ್ವಾನ ಆಧರಿಸಿ ವಿರೋಧಪಕ್ಷ ಸೇರುವುದನ್ನು ಪಕ್ಷ ಪರಿಗಣಿಸಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ವಿರುದ್ಧ ಮೈತ್ರಿಕೂಟ ಸೇರುವ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಮೇಕೆದಾಟು ಕುರಿತ ಪ್ರಶ್ನೆಗೆ, ನಾನು ಚಲನಚಿತ್ರದಲ್ಲಿ ದ್ವಿಪಾತ್ರಗಳನ್ನು ನಿಭಾಯಿಸಿದ್ದೇನೆ. ರಾಜಕಾರಣದಲ್ಲಿ ದ್ವಿಪಾತ್ರ ನಿಭಾಯಿಸುತ್ತಿರುವವರನ್ನು ನಾನು ಗುರುತಿಸಬಲ್ಲೆ. ಹೆಸರು ಬೇರೆಯಾಗಿರಬಹುದು, ಆದರೆ, ಎಲ್ಲರೂ ಕೇಂದ್ರ ಸರ್ಕಾರದ ಕೈಗೊಂಬೆಯೇ ಆಗಿದ್ದಾರೆ ಎಂದು ಕಮಲ್ ಹಾಸನ್ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.