ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಕಾರದ ಹೋರಾಟ ಕೇವಲ ನಾಟಕ: ಕೇಜ್ರಿವಾಲ್ ವ್ಯಂಗ್ಯ

ಇ.ಡಿ ಭೀತಿಯಿಂದ ಬಿಜೆಪಿಗೆ ಸೇರುವವರು ನಿಜವಾದ ಅರ್ಥದಲ್ಲಿ ಭ್ರಷ್ಟರು–ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
Published 5 ನವೆಂಬರ್ 2023, 13:35 IST
Last Updated 5 ನವೆಂಬರ್ 2023, 13:35 IST
ಅಕ್ಷರ ಗಾತ್ರ

ಚಂಡೀಗಢ: ಭ್ರಷ್ಟಾಚಾರದ ವಿರುದ್ಧದ ನರೇಂದ್ರ ಮೋದಿ ಸರ್ಕಾರದ ಹೋರಾಟ ಕೇವಲ ಒಂದು ನಾಟಕ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.

ಇಂದು(ಭಾನುವಾರ) ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘ಯಾರಾದರೂ ದೊಡ್ಡ ಪಾಪ ಅಥವಾ ಅಪರಾಧ ಮಾಡಿ ಬಿಜೆಪಿಗೆ ಸೇರಿದರೆ, ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆ ವ್ಯಕ್ತಿಯನ್ನು ಮುಟ್ಟಲು ಎಂದಿಗೂ ಧೈರ್ಯ ಮಾಡಿಲ್ಲ. ಬಿಜೆಪಿ ಆರೋಪಿಸಿದ ವ್ಯಕ್ತಿ ಪಕ್ಷಕ್ಕೆ ಸೇರಿದ ನಂತರ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ' ಎಂದು ದೂರಿದ್ದಾರೆ.

ಯಾರು ಭ್ರಷ್ಟರು?. ಇ.ಡಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದವರಲ್ಲ. ಬದಲಿಗೆ ಇ.ಡಿಗೆ ಹೆದರಿ ಬಿಜೆಪಿ ಸೇರಿದವರೇ ನಿಜವಾದ ಅರ್ಥದಲ್ಲಿ ಭ್ರಷ್ಟರು. ಇ.ಡಿಯಿಂದ ಸಿಕ್ಕಿಬಿದ್ದರೂ, ಬಿಜೆಪಿಗೆ ಸೇರದವರು ಕಟು ಪ್ರಾಮಾಣಿಕರು. ಏಕೆಂದರೆ ಇಂದು ಅಥವಾ ನಾಳೆ ತಾವು ಹೊರಬರುತ್ತೇವೆ ಎಂದು ಅವರಿಗೆ ತಿಳಿದಿದೆ.

ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ತಮ್ಮನ್ನು ಬಂಧಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಮತ್ತು ತಕ್ಷಣವೇ ಬಿಜೆಪಿ ಸೇರಬೇಕಾಗುತ್ತದೆ ಎಂದು ತಿಳಿದಿದೆ. ಹಾಗಾದರೆ ಯಾರು ಭ್ರಷ್ಟರು ಮತ್ತು ಯಾರು ಪ್ರಾಮಾಣಿಕರು?ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT