ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ದೇಶದ ಇತಿಹಾಸ ಕಂಡ ಯಶಸ್ವಿ ಪ್ರಧಾನಿ: ಮುಖೇಶ್‌ ಅಂಬಾನಿ

Published 10 ಜನವರಿ 2024, 11:58 IST
Last Updated 10 ಜನವರಿ 2024, 11:58 IST
ಅಕ್ಷರ ಗಾತ್ರ

ಗಾಂಧಿನಗರ: ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಇತಿಹಾಸ ಕಂಡ ಯಶಸ್ವಿ ಪ್ರಧಾನ ಮಂತ್ರಿ ಹಾಗೂ ಜಾಗತಿಕ ಮಟ್ಟದ ಶ್ರೇಷ್ಠ ನಾಯಕ’ ಎಂದು ‘ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್’ ಅಧ್ಯಕ್ಷ ಮುಖೇಶ್‌ ಅಂಬಾನಿ ಬಣ್ಣಿಸಿದ್ದಾರೆ.

ವೈಬ್ರೆಂಟ್‌ ಗುಜರಾತ್‌ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಾನೊಬ್ಬ ಗುಜರಾತಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಎಂದೆಂದಿಗೂ ರಿಲಯನ್ಸ್ ಗುಜರಾತಿ ಕಂಪನಿಯಾಗಿಯೇ ಗುರುತಿಸಿಕೊಳ್ಳಲಿದೆ ’ ಎಂದರು.

‘ಈ ಯುಗದ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದ ನಮ್ಮ ಪ್ರೀತಿಯ ನಾಯಕ ನರೇಂದ್ರ ಮೋದಿ ಅವರು ಭಾರತದ ಇತಿಹಾಸ ಕಂಡ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿಯು ಹೌದು’ ಎಂದು ಹೇಳಿದರು.

‘ಮೋದಿ ಹೈ ತೊ ಮಮ್‌ಕಿನ್ ಹೈ ಎಂದರೆ ಏನು ಎಂದು ನನ್ನ ವಿದೇಶಿ ಸ್ನೇಹಿತನೊಬ್ಬ ಕೇಳಿದ್ದ. ‘ಭಾರತದ ಪ್ರಧಾನ ಮಂತ್ರಿ ತನ್ನ ದೂರದೃಷ್ಟಿ, ದೃಢತೆಯಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ’ ಎಂದು ಆತನಿಗೆ ಹೇಳಿದ್ದೆ’ ಎಂದು ನೆನಪಿಸಿಕೊಂಡರು.

‘ಒಬ್ಬ ಶ್ರೇಷ್ಠ ನಾಯಕನ ದೂರದೃಷ್ಟಿಯಿಂದ ಇಂದು ವಿದೇಶಿಗರು ನವ ಭಾರತದ ಬಗ್ಗೆ ಯೋಚಿಸುವಾಗಲೆಲ್ಲ, ಹೊಸ ಗುಜರಾತ್‌ ಬಗ್ಗೆ ಕಲ್ಪಿಸಿಕೊಳ್ಳುತ್ತಾರೆ. ಆ ಶ್ರೇಷ್ಠ ನಾಯಕನೇ ನರೇಂದ್ರ ಮೋದಿ’ ಎಂದು ತಿಳಿಸಿದರು.

‘2047ರ ವೇಳೆಗೆ ಭಾರತವು 35 ಟ್ರಿಲಿಯನ್‌ ಅಮೆರಿಕ ಡಾಲರ್‌ ಆರ್ಥಿಕ ಪ್ರಗತಿ ಸಾಧಿಸುವುದನ್ನು ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಗುಜರಾತ್ ರಾಜ್ಯವೊಂದೇ 3 ಟ್ರಿಲಿಯನ್ ಅಮೆರಿಕನ್ ಡಾಲರ್‌ ಆರ್ಥಿಕ ಬೆಳವಣಿಗೆ ಕಾಣಲಿದೆ. ಈ ಅಮೃತ ಕಾಲದಲ್ಲಿ ಭಾರತವು ಅಭಿವೃದ್ದಿ ಹೊಂದಿದ ದೇಶವಾಗಿ ಪರಿವರ್ತನೆಯಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT