ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನ್ಯಾದಿಂದ ಚೀತಾ ತರಲು ಭಾರತ ಪ್ರಸ್ತಾವ

Published 6 ಡಿಸೆಂಬರ್ 2023, 5:38 IST
Last Updated 6 ಡಿಸೆಂಬರ್ 2023, 5:38 IST
ಅಕ್ಷರ ಗಾತ್ರ

ನವದೆಹಲಿ: ಕೆನ್ಯಾದಿಂದ ಚೀತಾಗಳನ್ನು ತರಿಸಿಕೊಳ್ಳುವ ಸಂಬಂಧ ಪರಿಸರ ಮತ್ತು ಅರಣ್ಯ ಸಚಿವಾಲಯ ಮಂಗಳವಾರ ಅಧಿಕೃತವಾಗಿ ಪ್ರಸ್ತಾವ ಸಲ್ಲಿಸಿದೆ.

‘ಎಷ್ಟು ಚೀತಾಗಳನ್ನು ತರಿಸಿಕೊಳ್ಳಲು ಭಾರತ ಬಯಸಿದೆ ಹಾಗೂ ಕೆನ್ಯಾ ನೀಡಲು ಒಪ್ಪಿರುವ ಈ ವನ್ಯಮೃಗಗಳ ಸಂಖ್ಯೆ ಬಗ್ಗೆ ಮಾಹಿತಿ ಇಲ್ಲ. ಆದರೆ, ಚೀತಾಗಳನ್ನು ತರಿಸಿಕೊಳ್ಳುವ ಬಗ್ಗೆ ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾಗಳಿಂದ ಒಟ್ಟು 20 ಚೀತಾಗಳನ್ನು ತರಿಸಲಾಗಿದ್ದು, ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿದೆ. ಈ ಪೈಕಿ ಆರು ಚೀತಾಗಳು ಮೃತಪಟ್ಟಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT