ಮುಂಬೈ:ಚೆಂಬೂರ್ ಮತ್ತು ವಡಾಲ ನಡುವಿನ ಮೊನೊ ರೈಲು ಸಂಚಾರ ಸಾರ್ವಜನಿಕ ಸೇವೆಗೆ ಶನಿವಾರ ಪುನರಾರಂಭವಾಗಿದೆ.

ಚೆಂಬೂರ್ ಮತ್ತು ವಡಾಲ ಮಧ್ಯೆ ಸಂಚರಿಸುತ್ತಿದ್ದ ವೇಳೆ 2017ರ ನವೆಂಬರ್ 9ರಂದು ಮೈಸೂರು ಕಾಲೊನಿ ಬಳಿ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಎಎನ್ಐ ಟ್ವಿಟ್ ಮಾಡಿದೆ.

ಘಟನೆ ನಡೆದು 10 ತಿಂಗಳ ಬಳಿಕ ಮೊನೊ ರೈಲು ಸಂಚಾರವನ್ನು ಸೇವೆ ಸಿದ್ಧಗೊಳಿಸಿ, ಸಮರ್ಪಿಸಲಾಗಿದೆ.

2014ರ ಫೆಬ್ರುವರಿಯಲ್ಲಿ ಚೆಂಬೂರ್ ಮತ್ತು ವಡಾಲ ನಡುವೆ ಮೊನೊ ರೈಲು ಸಂಚಾರ ಆರಂಭಿಸಲಾಗಿತ್ತು.

ಅಧಿಕೃತವಾಗಿ ಆರಂಭಗೊಳ್ಳುವುದಕ್ಕೂ ಮೊದಲು ಪ್ರಯೋಗಾತ್ಮಕ ಸಂಚಾರ ನಡೆಸಲಾಗಿತ್ತು. ಈ ವೇಳೆ ಜನರು ಕುತೂಹಲದಿಂದ ಮೋನೊ ರೈಲಿನ ಒಳಹೊರಗೆ ಇಣಕಿ, ಆಸೀನರಾಗಿ ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.