ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ 5ರಷ್ಟು ಅಧಿಕ ಮಳೆ

Published : 24 ಸೆಪ್ಟೆಂಬರ್ 2024, 15:52 IST
Last Updated : 24 ಸೆಪ್ಟೆಂಬರ್ 2024, 15:52 IST
ಫಾಲೋ ಮಾಡಿ
Comments

ನವದೆಹಲಿ: ದೇಶದ ವಿವಿಧೆಡೆ ಅಬ್ಬರಿಸಿದ್ದ ನೈರುತ್ಯ ಮುಂಗಾರು ಮಾರುತಗಳು ಸೋಮವಾರದಿಂದ ಆರಂಭಗೊಂಡಂತೆ ದುರ್ಬಲಗೊಳ್ಳಲಾರಂಭಿಸಿದೆ. ಇದರ ಪರಿಣಾಮ, ರಾಜಸ್ಥಾನದ ಪಶ್ಚಿಮ ಭಾಗ ಮತ್ತು ಕಚ್‌ ಪ್ರಾಂತ್ಯದಲ್ಲಿ ಮಳೆ ಕೊರತೆಯಾಗಿದೆ.

ಮುಂಗಾರು ಅವಧಿಯಲ್ಲಿ ದೇಶದಲ್ಲಿ ವಾಡಿಕೆಗಿಂತಲೂ ಶೇ 5ರಷ್ಟು ಅಧಿಕ ಮಳೆಯಾಗಿದೆ. ಮುಂಗಾರು ದುರ್ಬಲವಾಗುತ್ತಿದ್ದರೂ ಬರುವ ವಾರಗಳಲ್ಲಿ ಕೆಲವೆಡೆ ಧಾರಾಕಾರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ನೈರುತ್ಯ ಮುಂಗಾರು ಈ ಹಂಗಾಮಿನಲ್ಲಿ ಅಕ್ಟೋಬರ್ 15ರ ವೇಳೆಗೆ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ದುರ್ಬಲವಾಗಲಿದೆ. ಜೂನ್‌ 1 ರಿಂದ ಸೆಪ್ಟೆಂಬರ್ 23ರವರೆಗಿನ ಅವಧಿಯಲ್ಲಿ ಒಟ್ಟಾರೆ 880.8 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿನ ವಾಡಿಕೆಯ ಮಳೆಯ ಪ್ರಮಾಣ 837.7 ಮಿ.ಮೀ ಆಗಿದೆ ಎಂದು ಇಲಾಖೆಯು ವಿವರಿಸಿದೆ.

‘ರಾಜಸ್ಥಾನದ ಪಶ್ಚಿಮ ಭಾಗಳಲ್ಲಿ ನೈರುತ್ಯ ಮುಂಗಾರು ವಾಡಿಕೆಯಂತೆ ಸೆ. 17ರ ವೇಳೆಗೆ ದುರ್ಬಲವಾಗುತ್ತಿತ್ತು. ಈ ಹಂಗಾಮಿನಲ್ಲಿ ಸೆ. 23ರವರೆಗೂ ಮುಂಗಾರು ಕಾಣಿಸಿದೆ. ಪಂಜಾಬ್‌, ಗುಜರಾತ್‌ ವ್ಯಾಪ್ತಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ದುರ್ಬಲವಾಗುವ ಸೂಚನೆಗಳಿವೆ’ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ನೈರುತ್ಯ ಮುಂಗಾರು ಅವಧಿಯಲ್ಲಿ ಐದು ಉಪ ವಿಭಾಗ ಹೊರತುಪಡಿಸಿ ಉಳಿದ ಎಲ್ಲ ಕಡೆ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರ (–ಶೇ 26), ಹಿಮಾಚಲ ಪ್ರದೇಶ (–ಶೇ 20), ಅರುಣಾಚಲ ಪ್ರದೇಶ (–ಶೇ 30), ಬಿಹಾರ (–ಶೇ 28), ಪಂಜಾಬ್ (–ಶೇ 27) ಉಪ ವಿಭಾಗಗಳಲ್ಲಿ ಕೊರತೆ ಮಳೆಯಾಗಿದೆ.

ಒಂಬತ್ತು ಉಪ ವಿಭಾಗಗಳಲ್ಲಿ ವಾಡಿಕೆಗಿಂತಲೂ ಅತ್ಯಧಿಕ ಮಳೆಯಾಗಿದೆ. ಈ ಪೈಕಿ ರಾಜಸ್ಥಾನದಲ್ಲಿ (ಶೇ 74), ಗುಜರಾತ್‌ನಲ್ಲಿ (ಶೇಶೇ 68) ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಇಲಾಖೆಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT