ಪಿಟಿಐ

ನವದೆಹಲಿ: ‘ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯವು ವಿವರಣೆಗೆ ನಿಲುಕದ್ದು. ಪ್ರಧಾನಿ ಮೋದಿ ಅವರ ಸ್ನೇಹಿತ ನೆತನ್ಯಾಹು ಅವರು ಪ್ಯಾಲಿಸ್ಟೀನ್ ಜನರ ಮೇಲೆ ನಡೆಸುತ್ತಿರುವ ಇಂಥ ಘೋರ ದೌರ್ಜನ್ಯದ ವಿರುದ್ಧ ಮೋದಿ ಸರ್ಕಾರವು ಮೌನ ವಹಿಸಿದೆ. ಭಾರತವು ಈ ಮಟ್ಟದ ‘ನೈತಿಕ ಹೇಡಿತನ’ವನ್ನು ಎಂದೂ ಪ್ರದರ್ಶಿಸಿರಲಿಲ್ಲ’ ಎಂದು ಕಾಂಗ್ರೆಸ್ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಆಹಾರದಂಥ ಮೂಲಭೂತ ಸೌಕರ್ಯ ಪಡೆದುಕೊಳ್ಳುತ್ತಿರುವ ಜನರನ್ನೂ ಹತ್ಯೆ ಮಾಡಲಾಗುತ್ತಿದೆ. ಅವರನ್ನು ಒತ್ತಾಯಪೂರ್ವಕವಾಗಿ ಉಪವಾಸಗೆಡವಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ನರಮೇಧ ನಡೆಯುತ್ತಿದೆ. ಒಂದು ಜನಾಂಗವನ್ನೇ ನಿರ್ನಾಮ ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.