ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಜಾದ್ ಪಕ್ಷದಿಂದ ಇನ್ನೂ ಹಲವರು ಕಾಂಗ್ರೆಸ್‌ಗೆ: ಜೈರಾಂ ರಮೇಶ್

Last Updated 16 ಜನವರಿ 2023, 10:52 IST
ಅಕ್ಷರ ಗಾತ್ರ

ನವದೆಹಲಿ: ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಆಜಾದ್ ಪಕ್ಷದಿಂದ (ಡಿಎಪಿ) ಇನ್ನೂ ಹಲವರು ಮಂಗಳವಾರ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ಸೋಮವಾರ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಡಿಎಪಿಯಲ್ಲಿದ್ದ ಜಮ್ಮು–ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾಚಂದ್ ಮತ್ತು ಪೀರ್‌ಜಾದಾ ಮೊಹಮ್ಮದ್ ಸಯೀದ್ ಸೇರಿದಂತೆ ಒಟ್ಟು 17 ನಾಯಕರು ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದರು.

‘ಆಜಾದ್ ಅವರ ಡಿಎಪಿ ಪಕ್ಷವು ಕಣ್ಮರೆಯಾಗಲಿದ್ದು, ಅಲ್ಲಿನ ಅನೇಕ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ’ ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

‘ಜ.19ರಂದು ಭಾರತ್ ಜೋಡೊ ಯಾತ್ರೆಯನ್ನು ಸ್ವಾಗತಿಸಲಿರುವ ಜಮ್ಮುವಿನಿಂದ ಸುದ್ದಿಯನ್ನು ನಿರೀಕ್ಷಿಸಿ’ ಎಂದೂ ರಮೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT