ನವದೆಹಲಿ: ದೆಹಲಿಯ 5ಕ್ಕೂ ಹೆಚ್ಚು ಮೆಟ್ರೊ ನಿಲ್ದಾಣಗಳಲ್ಲಿ ಕಿಡಿಗೇಡಿಗಳು ‘ದೆಹಲಿ ಬನೇಗಾ ಖಾಲಿಸ್ತಾನ್ ಮತ್ತು ಖಾಲಿಸ್ತಾನ್ ಜಿಂದಾಬಾದ್’ ಬರಹಗಳನ್ನು ಬರೆದಿರುವುದು ಕಂಡು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದಿನ ತಿಂಗಳು ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು, ಇದರ ಬೆನ್ನಲ್ಲೇ ಕಿಡಿಗೇಡಿಗಳ ಈ ಕೃತ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಇಡೀ ದೇಶವೇ ಜಿ20 ಶೃಂಗಸಭೆಗೆ ಅತಿಥ್ಯ ವಹಿಸುತ್ತಿದೆ. ಆದರೆ ಅತಿಥಿಗಳು ದೆಹಲಿಗೆ ಆಗಮಿಸುತ್ತಾರೆ. ಜಿ20 ಶೃಂಗಸಭೆ ಯಶಸ್ವಿಗೊಳಿಸಲು ದೆಹಲಿ ನಿವಾಸಿಗಳ ಮೇಲೆ ವಿಶೇಷ ಜವಾಬ್ದಾರಿ ಇದೆ. ರಾಷ್ಟ್ರದ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜಿ-20 ಶೃಂಗಸಭೆ ಸೆ. 9 ಹಾಗೂ 10ರಂದು ನಡೆಯಲಿದೆ. 40ಕ್ಕೂ ಹೆಚ್ಚು ದೇಶಗಳ ನಾಯಕರು, ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಯ್ದ ದೇಶಗಳ ಅತಿಥಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.