ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ | 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳ ಮನೆಗಳು ನೆಲಸಮ

Published 29 ಜುಲೈ 2023, 11:16 IST
Last Updated 29 ಜುಲೈ 2023, 11:16 IST
ಅಕ್ಷರ ಗಾತ್ರ

ಸತ್ನಾ (ಮಧ್ಯಪ್ರದೇಶ): ಜಿಲ್ಲೆಯ ಮೈಹರ್ ಪಟ್ಟಣದಲ್ಲಿ 12 ವರ್ಷದ ಬಾಲಕಿಯೊಂದಿಗೆ ಕ್ರೂರವಾಗಿ ವರ್ತಿಸಿ, ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳ ಮನೆಗಳನ್ನು ಸ್ಥಳೀಯ ಆಡಳಿತ ಶನಿವಾರ ನೆಲಸಮಗೊಳಿಸಿದೆ.

ರವೀಂದ್ರಕುಮಾರ್ ಹಾಗೂ ಅತುಲ್ ಭದೋಲಿಯಾ ಎಂಬುವವರು ಆರೋಪಿಗಳಾಗಿದ್ದು, ಅವರ ವಿರುದ್ಧ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

‘ಈ ಇಬ್ಬರು ಆರೋಪಿಗಳು ಬಾಲಕಿಯನ್ನು ಗುರುವಾರ ಹೊಡೆದು, ಆಕೆ ಮೇಲೆ ಅತ್ಯಾಚಾರ ಎಸಗಿದ್ದರು. ನಂತರ ಮರ್ಮಾಂಗದಲ್ಲಿ ಗಡುಸಾದ ವಸ್ತುವೊಂದನ್ನು ತುರುಕಿದ್ದರು ಎನ್ನಲಾಗಿದೆ' ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಆರೋಪಿಗಳಿಬ್ಬರನ್ನು ಸ್ಥಳೀಯ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಗಿತ್ತು. ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಅಶುತೋಷ್ ಗುಪ್ತ ಹೇಳಿದ್ದಾರೆ.

‘ಆಮಿಷವೊಡ್ಡಿ, ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದಿದ್ದ ಆರೋಪಿಗಳು, ನಂತರ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ’.

‘ಆರೋಪಿಗಳು ಬಡಿಗೆ ಅಥವಾ ಬೇರೆ ವಸ್ತುವೊಂದನ್ನು ಬಾಲಕಿಯ ಗುಪ್ತಾಂಗದಲ್ಲಿ ತುರುಕಿದ್ದರು ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರ ಇದನ್ನು ಖಚಿತಪಡಿಸಲು ಸಾಧ್ಯ’ ಎಂದು ಹೇಳಿದ್ದಾರೆ.

‘ವಿಪರೀತ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ರೇವಾ ನಗರದ ಸಂಜಯ್‌ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಬಾಲಕಿಯನ್ನು ಭೋಪಾಲ್‌ ಅಥವಾ ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಗುವುದು’ ಎಂದೂ ಗುಪ್ತ ತಿಳಿಸಿದ್ದಾರೆ.

ಈ ಘಟನೆ ಗೊತ್ತಾದ ಬೆನ್ನಲ್ಲೇ, ಆರೋಪಿಗಳ ಕುಟುಂಬಗಳಿಗೆ ಮೈಹರ್ ಪುರಸಭೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿ, ಅವರಿಗೆ ಸೇರಿದ ಜಮೀನು ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು.

‘ಆರೋಪಿಗಳಿಗೆ ಸೇರಿದ ಮನೆಗಳನ್ನು ಕಾನೂನುಬಾಹಿರವಾಗಿ ನಿರ್ಮಿಸಿರುವುದು ದಾಖಲೆಗಳ ಪರೀಶೀಲನೆಯಿಂದ ತಿಳಿದುಬಂದ ಕಾರಣ, ಶನಿವಾರ ಬೆಳಿಗ್ಗೆ ಎರಡೂ ಮನೆಗಳನ್ನು ನೆಲಸಮಗೊಳಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿ ಲೋಕೇಶ್ ಡಾಬರ್ ತಿಳಿಸಿದ್ದಾರೆ.

‘ಮನೆಗಳನ್ನು ನೆಲಸಮಗೊಳಿಸಲು ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ, ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳುವಂತೆ ಭದೋಲಿಯಾ ಕುಟುಂಬದ ಸದಸ್ಯರು ಮನವಿ ಮಾಡಿದರು. ಆದರೆ, ಅಧಿಕಾರಿಗಳು ಮನೆಗಳನ್ನು ನೆಲಸಮಗೊಳಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಜಾ: ಆರೋಪಿಗಳು ಪಟ್ಟಣದ ಮಾ ಶಾರದಾದೇವಿ ಮಂದಿರದ ನೌಕರರಾಗಿದ್ದರು.

‘ಘಟನೆ ಹಿನ್ನೆಲೆಯಲ್ಲಿ ರವೀಂದ್ರಕುಮಾರ್‌ ಹಾಗೂ ಅತುಲ್‌ ಭದೋಲಿಯಾ ಅವರನ್ನು ನೌಕರಿಯಿಂದ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ’ ಎಂದು ಮಂದಿರ ನಿರ್ವಹಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT