ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯವ್ಯಸನಿ ಗಂಡನ ಕಿರುಕುಳ: ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಮಹಿಳೆ ಆತ್ಮಹತ್ಯೆ

Last Updated 11 ಮಾರ್ಚ್ 2023, 13:03 IST
ಅಕ್ಷರ ಗಾತ್ರ

ನರಸಿಂಗಪುರ: ಮದ್ಯ ವ್ಯಸನಿ ಗಂಡನ ಕಿರುಕುಳದಿಂದ ತಪ್ಪಿಸಿಕೊಳ್ಳಲು 38 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮಹಿಳೆ ಮತ್ತು 19 ವರ್ಷದ ಮಗ ಹಾಗೂ 16 ವರ್ಷದ ಬಾಲಕಿ ಹಿಂಸೆಯಿಂದ ಬೇಸತ್ತು ಗಡರ್‌ವಾರಾ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆಗೆ ರೈಲ್ವೆ ಹಳಿ ಮೇಲೆ ಮೃತದೇಹಗಳು ಇರುವ ಮಾಹಿತಿ ಸಿಕ್ಕಿದೆ ಎಂದು ಸ್ಥಳೀಯ ಉಪ ವಿಭಾಗದ ಪೊಲೀಸ್‌ ಅಧಿಕಾರಿ ಶಶಿ ಪಠಾಕ್ ತಿಳಿಸಿದ್ದಾರೆ.

ಯುವಕನ ಜೇಬಿನಲ್ಲಿ ಪತ್ರ ಸಿಕ್ಕಿದ್ದು, ಅದರಲ್ಲಿ ನಮ್ಮ ತಂದೆ ಕುಡಿದು ತೊಂದರೆ ನೀಡುವರು. ಇದರಿಂದ ಬೇಸತ್ತು ಮೂರು ಮಂದಿ ಪ್ರಾಣ ತೆಗೆದುಕೊಳ್ಳುತ್ತಿದ್ದೇವೆ ಎಂದು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ತಂದೆಯನ್ನು ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪಠಾಕ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT