ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಹೋರ್ಡಿಂಗ್ ದುರಂತ: ಗೋವಾದಲ್ಲಿ ಇನ್ನಿಬ್ಬರ ಬಂಧನ

Published 8 ಜೂನ್ 2024, 15:00 IST
Last Updated 8 ಜೂನ್ 2024, 15:00 IST
ಅಕ್ಷರ ಗಾತ್ರ

ಮುಂಬೈ: ಮುಂಬೈನ ಘಾಟ್ಕೋಪರ್‌ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಹೋರ್ಡಿಂಗ್‌ ಕುಸಿತ ಪ್ರಕರಣ ಸಂಬಂಧ ಇನ್ನಿಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹ್ನವಿ ಮರಾಠೆ ಹಾಗೂ ಸಾಗರ್‌ ಪಾಟೀಲ್ ಎಂಬಿಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಇವರು ಹೋರ್ಡಿಂಗ್ ನಿರ್ಮಾಣ ಸಂಸ್ಥೆ ಎಗೊ ಮಿಡಿಯಾ ‍ಪ್ರೈವೆಟ್‌ ಲಿಮಿಟೆಡ್‌ಗೆ ಸಂಬಂಧಿಸಿದವರು. ಅಲ್ಲಿಗೆ ‍ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

ಕಳೆದ ವರ್ಷ ಡಿಸೆಂಬರ್‌ವರೆಗೂ ಸಂಸ್ಥೆಯ ಜೊತೆ ನಿರ್ದೇಶಕರಾಗಿದ್ದ ಮರಾಠೆ, ಈ ಹೋರ್ಡಿಂಗ್ ಸಂಬಂಧ ಹಣಕಾಸು ಲಾಭಗಳನ್ನು ಪಡೆದುಕೊಂಡಿದ್ದರು. ಪಾಟೀಲ್ ಈ ಹೋರ್ಡಿಂಗ್‌ನ ಗುತ್ತಿಗೆದಾರರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಎಗೊ ಮಿಡಿಯಾ ಸಂಸ್ಥೆಯ ನಿರ್ದೇಶಕ ಭವೇಶ್ ಕುಮರ್‌ ಹಾಗೂ ಸ್ಟ್ರಕ್ಚರಲ್ ಎಂಜಿನಿಯರ್ ಮನೋಜ್ ಸಂಘು ಅವರನ್ನು ಅವರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT