ಮುಂಬೈ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮುಂಬೈ ನಗರದ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಹಲವು ಭಾಗಗಳಲ್ಲಿ ವಾಹನ ಸಂಚಾರ ಮಂದಗತಿಯಲ್ಲಿದ್ದವು ಎಂದು ಪಾಲಿಕೆಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
.ಮುಂಬೈ: ಬಿಎಸ್ಇ ಕಟ್ಟಡಕ್ಕೆ ಹುಸಿ ಬಾಂಬ್ ಬೆದರಿಕೆ.
ಈ ತಿಂಗಳ ಆರಂಭದಲ್ಲಿ ನಗರದಲ್ಲಿ ಸಾಧಾರಣ ಮಳೆಯಾಗಿತ್ತು. ಕೆಲ ದಿನಗಳಿಂದ ಮೊಡಕಟ್ಟಿದ ವಾತಾವರವಿತ್ತು. ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ.

ಸೋಮವಾರ ಬೆಳಿಗ್ಗೆ ಮಳೆಯ ಅಬ್ಬರ ತಗ್ಗಿದರೂ, ಪೂರ್ವ ಮತ್ತು ಪೂರ್ವ ಉಪನಗರಗಳಲ್ಲಿ ಭಾರಿ ಮಳೆ ಮುಂದುವರೆದಿದೆ.
.ಮುಂಬೈ | ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ಗೆ ಬೆಂಕಿ .
ಮಳೆಯಿಂದ ನೀರು ನಿಂತಿದ್ದರಿಂದ ಪಶ್ಚಿಮ ಮುಂಬೈನಲ್ಲಿರುವ ಅಂಧೇರಿ ಸುರಂಗಮಾರ್ಗ ಮುಚ್ಚಲಾಗಿತ್ತು. ಪಶ್ಚಿಮ ಹಾಗೂ ಪೂರ್ವ ಎಕ್ಸ್ಪ್ರೆಸ್ ಹೈವೆಯಲ್ಲಿ ಸೋಮವಾರ ಬೆಳಿಗ್ಗೆ ಸಂಚಾರ ಮಂದಗತಿಯಲ್ಲಿತ್ತು. ಲೋಕಲ್ ರೈಲು ಕೂಡ ತಡವಾಗಿ ಸಂಚರಿಸುತ್ತಿದೆ ಎಂದು ಕೆಲವರು ದೂರಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಯ ಅವಧಿಯಲ್ಲಿ ಮುಂಬೈನಲ್ಲಿ 23.45 ಮಿ.ಮೀ ಮಳೆಯಾಗಿದೆ. ಪೂರ್ವ ಉಪನಗರಗಳಲ್ಲಿ 36.42 ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ 50.02 ಮಿ.ಮೀ ಮಳೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
.ಮುಂಬೈ | ಬ್ರಿಟಿಷರ ಕಾಲದ ಸೇತುವೆ ಪುನರ್ನಿರ್ಮಾಣ: ಸಿಂಧೂರ ಸೇತುವೆ ಎಂದು ನಾಮಕರಣ.
ಮುಂದಿನ 24 ಗಂಟೆಯಲ್ಲಿ ಮುಂಬೈ ಹಾಗೂ ಉಪನಗರಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ, ಕೆಲ ಪ್ರದೇಶಗಳಲ್ಲಿ ಗಾಳಿಯೂ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
.ಮಹಾರಾಷ್ಟ್ರದಿಂದ ಮುಂಬೈ ಬೇರ್ಪಡಿಸುವ ಹುನ್ನಾರ: ರಾಜ್ ಠಾಕ್ರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.