ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೇ ನನ್ನನ್ನು ಮತ್ತು ಉದ್ಧವ್ ಅನ್ನು ಒಂದುಗೂಡಿಸಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಅವರಿಗೂ ಇದು ಸಾಧ್ಯವಾಗಿರಲಿಲ್ಲ.
ರಾಜ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ
ಇದೊಂದು ವಿಜಯ ರ್‍ಯಾಲಿ ಎಂದು ನನಗೆ ಹೇಳಲಾಗಿತ್ತು. ಆದರೆ ಇದು ‘ರುಡಾಲಿ’ ಭಾಷಣದಂತಾಯಿತು.
ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ (ಪ್ರಬಲ ಜಾತಿಗಳು ತಮ್ಮ ಮನೆಯಲ್ಲಿ ಸಾವಾದಾಗ ಅಳುವುದಕ್ಕಾಗಿಯೇ ಮಹಿಳೆಯರನ್ನು ನೇಮಿಸುತ್ತಾರೆ. ಇವರನ್ನು ರುಡಾಲಿ ಎನ್ನಲಾಗುತ್ತದೆ. ರಾಜಸ್ಥಾನದಲ್ಲಿ ಈ ಆಚರಣೆ ಇದೆ)
ಒಟ್ಟಿಗೆ ಇರಲೆಂದೇ ನಾವು ಈಗ ಒಂದುಗೂಡಿದ್ದೇವೆ. ಮುಂಬೈನ ಪಾಲಿಕೆ ಚುನಾವಣೆಯಲ್ಲಿ ಮತ್ತು ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿ ಅಧಿಕಾರ ಹಿಡಿಯುತ್ತೇವೆ.
ಉದ್ಧವ್ ಠಾಕ್ರೆ, ಶಿನಸೇನೆ (ಉದ್ಧವ್ ಬಣ) ಮುಖ್ಯಸ್ಥ
ರಾಜಕಾರಣದಲ್ಲಿ ತಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳುವ ಹತಾಶ ಯತ್ನವಿದು. ರ್‍ಯಾಲಿಯು ಕುಟುಂಬದ ಪುನರ್ಮಿಲನಂದತ್ತಿತ್ತು.
ಬಿಜೆಪಿ
ಆದೇಶವನ್ನು ಸರ್ಕಾರ ಹಿಂಪಡೆದಿದ್ದರ ಕುರಿತು ಸಹೋದರರು ಸಂಭ್ರಮಾಚರಣೆ ಮಾಡಬೇಕೆನ್ನಿಸಿದರೆ ಮಾಡಲಿ. ಸಂಭ್ರಮಾಚರಣೆ ಮಾಡುವುದು ಮತ್ತು ಇಬ್ಬರು ಸಹೋದರರು ಮೈತ್ರಿ ಮಾಡಿಕೊಳ್ಳುವುದು ಎರಡೂ ಬೇರೆ ಬೇರೆ ವಿಚಾರ.