ಮುಂಬೈ: ಮುಂಬೈಗೆ ಸೋಮವಾರ ನೈರುತ್ಯ ಮುಂಗಾರು ಭರ್ಜರಿ ಪ್ರವೇಶ ಮಾಡಿದೆ. ಇದರ ಪರಿಣಾಮ ಮುಂಬೈನ ಹಲವೆಡೆ ಭಾರಿ ಮಳೆಯಾಗುತ್ತಿದೆ.

ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಹಲವೆಡೆ ಜೋರು ಮಳೆಯಾಗುತ್ತಿದ್ದು ಸಿಡಿಲಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.

ಏತನ್ಮಧ್ಯೆ ಮುಂಬೈಗೆ ಅವಧಿಗೂ ಮುನ್ನವೇ ಮುಂಗಾರು ಪ್ರವೇಶ ಮಾಡಿದ್ದು 72 ವರ್ಷಗಳ ನಂತರ ಇದೇ ಮೊದಲು ಎಂದು ಐಎಂಡಿ ವಿಜ್ಞಾನಿ ಸುಸ್ಮಾ ನಾಯರ್ ತಿಳಿಸಿದ್ದಾರೆ.

1956 ರಲ್ಲಿ ಮೇ 29ಕ್ಕೆ ಮಾನ್ಸೂನ್ ಮುಂಬೈ ಪ್ರವೇಶ ಮಾಡಿತ್ತು. 1962 ಮತ್ತು 1971ರಲ್ಲಿ ಅದೇ ದಿನ ಮಾನ್ಸೂನ್ ಪ್ರವೇಶವಾಗಿತ್ತು. ಇದನ್ನು ಹೊರತುಪಡಿಸಿದರೇ ಇದೇ ಮೊದಲು ಮಾನ್ಸೂನ್ ಮುಂಬೈ ಆವರಿಸಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬೈಗೆ ಹೆಚ್ಚಾಗಿ ಮಾನ್ಸೂನ್ ಜೂನ್ ಮೊದಲ ವಾರದಲ್ಲೇ ಪ್ರವೇಶ ಮಾಡುತ್ತಿತ್ತು. ಈ ವರ್ಷ ಮೇ 26ರಂದೇ ಆಗಮನವಾಗಿದೆ.

ಮುಂಬೈನಲ್ಲಿ ಭಾರತೀಯ ಹವಾಮಾನ ಇಲಾಖೆ ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಭಾರಿ ಮಳೆಗೆ ಮುಂಬೈ ಮೆಟ್ರೊ ಲೈನ್ 3ರ ಆಚಾರ್ಯ ಅತ್ರೆ ಚೌಕ್–ವರ್ಲಿ ನಡುವಿನ ಮೆಟ್ರೊ ಸಂಚಾರ ರದ್ದಾಗಿದೆ. ಈ ನಡುವಿನ ನಿಲ್ದಾಣಗಳು ಜಲಾವ್ರತಗೊಂಡಿದೆ.
.Bengaluru Rains | ಈಶಾನ್ಯ ಮಾನ್ಸೂನ್ ಆರಂಭ; ಮಳೆಗೆ ನಡುಗಿದ ಬೆಂಗಳೂರು ಜನರು.Malenadu Rains | ಮುಂಗಾರು ಪೂರ್ವ; ಮಲೆನಾಡಿನಲ್ಲಿ ಆತಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.