ಲಖನೌ: ಇಲ್ಲಿನ ಮಾಲ್‌ವೊಂದರಲ್ಲಿ ಕೆಲವರು ‘ನಮಾಜ್’ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತೀಯ ಹಿಂದೂ ಮಹಾಸಭಾದ ಮುಖಂಡರು ಮಾಲ್‌ನಲ್ಲಿ ‘ಹನುಮಾನ್ ಚಾಲೀಸಾ’ ಪಠಿಸುವುದಾಗಿ ಗುರುವಾರ ಬೆದರಿಕೆಯೊಡ್ಡಿದ್ದಾರೆ.

ಈ ಸಂಬಂಧ ಮಹಾಸಭಾ ಪೊಲೀಸರಿಗೆ ದೂರು ಸಲ್ಲಿಸಿದೆ. ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲು ಪೊಲೀಸರು ವಿಫಲರಾದರೆ, ಸಂಘಟನೆಯ ಸದಸ್ಯರು ಮಾಲ್‌ನಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಲಿದ್ದಾರೆ ಎಂದು ಸಭಾ ತಿಳಿಸಿದೆ.

‘ಗಲ್ಫ್ ಮೂಲದ ಕಂಪನಿಯ ಒಡೆತನದ ಈ ಮಾಲ್‌ನಲ್ಲಿ ಶೇ 80ರಷ್ಟು ಸಿಬ್ಬಂದಿ ಮುಸ್ಲಿಂ ಸಮುದಾಯದವರು. ಇಲ್ಲಿ ಹಲವು ಹಿಂದೂ ಯುವತಿಯರೂ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಾಲ್‌ನಲ್ಲಿ ನಮಾಜ್ ಮಾಡುವುದು ಸರಿಯಲ್ಲ’ ಎಂದು ಅಯೋಧ್ಯೆಯ ಹನುಮಾನ್ ದೇವಾಲಯವೊಂದರ ಅರ್ಚಕ ಮಹಾಂತ ರಾಜು ದಾಸ್ಹೇಳಿದ್ದಾರೆ.

‘ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಆಗಿಯೇ ಇರಬೇಕು.ಅದನ್ನು ಮಸೀದಿ ಮಾಡಲು ಸರ್ಕಾರ ಬಿಡಬಾರದು’ ಎಂದು ಹಿಂದೂ ಮಹಾಸಭಾದ ಮುಖಂಡ ಚತುರ್ವೇದಿ ಆಗ್ರಹಿಸಿದ್ದಾರೆ.

ಆಡಳಿತ ಮಂಡಳಿ ಪ್ರತಿಕ್ರಿಯೆ: ‘ಮಾಲ್‌ನ ಸಿಬ್ಬಂದಿ ಅಥವಾ ಹೊರಗಿನವರಿಗೆ ಇಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿತ್ತಾ ಎಂಬುದರ ಕುರಿತು ಪರಿಶೀಲಿಸುತ್ತಿರುವುದಾಗಿ’ ಮಾಲ್‌ನ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ. ಈ ಮಾಲ್ ಅನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.