ಬೆಂಗಳೂರು:ಚೀನಾದಲ್ಲಿ 2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್ ಮಹಾಮಾರಿಗೆ ಕಾರಣವಾಗಿದ್ದ ವೈರಸ್‌ನಿಂದಲೇ ಕೋವಿಡ್–19 ಕೂಡ ಹರಡುತ್ತಿದೆ. ಸಾರ್ಸ್ ವೈರಸ್‌ನಿಂದಲೇ ಬಂದ ಈ ಕಾಯಿಲೆಗೆ ಕೋವಿಡ್–19 ಎಂದು ಹೆಸರಿಟ್ಟಿರುವ ಹಿಂದೆ ಉದ್ದೇಶವೂ ಇದೆ.

ಈ ಕಾಯಿಲೆಗೂ ಸಾರ್ಸ್ ಎಂದೇನಾಮಕರಣ ಮಾಡಿದರೆ ಏಷ್ಯಾದ ಜನರು ಹೆಚ್ಚು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ಜನರ ನಡುವೆ ಅನಗತ್ಯ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಆದ್ದರಿಂದಕೋವಿಡ್–19 ಎಂದು ಹೆಸರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ.

ಸಿವಿಯರ್ ಆ್ಯಕುಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್–2 (severe acute respiratory syndrome coronavirus 2) (ಸಾರ್ಸ್–ಕೊವಿ–2) ವೈರಾಣುವಿನಿಂದ ಸದ್ಯ ಕೋವಿಡ್ –19 ಹರಡುತ್ತಿದೆ.

ಕೋವಿಡ್–19 ವಿಶ್ವದಾದ್ಯಂತ 5,800ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು 1.50 ಲಕ್ಷ ಜನರು ಕೊರೊನಾ ವೈರಸ್ ರೋಗ ಪೀಡಿತರಾಗಿದ್ದಾರೆ.155 ದೇಶಗಳಲ್ಲಿ ಕೋವಿಡ್–19 ರೋಗವು ಪತ್ತೆಯಾಗಿದೆ.

2003 ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್ 811 ಜನರನ್ನ ಬಲಿ ಪಡೆದಿತ್ತು.

ವಿಶ್ವ ಆರೋಗ್ಯೆ ಸಂಸ್ಥೆ ಮತ್ತು ಐಸಿಟಿಸಿ ಸಂಸ್ಥೆಗಳಿಗೆ ರೋಗ ಮತ್ತು ರೋಗಾಣುಗಳಿಗೆ ಹೆಸರು ನೀಡುವ ಅಧಿಕಾರ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.