ನವದೆಹಲಿ: ‘ರಾಷ್ಟ್ರೀಯ ಶಿಕ್ಷಣ ನೀತಿ–2020‘ ಆರಂಭವಾಗಿ ಜುಲೈ 29ಕ್ಕೆ ಒಂದು ವರ್ಷವಾಗಲಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರದ ನೀತಿ ನಿರೂಪಕರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

ಇದೇ ವೇಳೆ ಪ್ರಧಾನಿಯವರು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳನ್ನು ಒದಗಿಸುವ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳನ ಆರಂಭ ಸೇರಿದಂತೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡಿರುವ ಅನೇಕ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಗ್ರೇಡ್ 1 ವಿದ್ಯಾರ್ಥಿಗಳಿಗಾಗಿ ಮೂರು ತಿಂಗಳ ಅವಧಿಯ ನಾಟಕ ಆಧಾರಿತ ಶಾಲಾ ತಯಾರಿ ‘ವಿದ್ಯಾ ಪ್ರವೇಶ್‘ ಮಾಡ್ಯೂಲ್, ಎರಡನೇ ಹಂತದಲ್ಲಿ ಭಾರತೀಯ ಸಂಕೇತ ಭಾಷೆ ಮತ್ತು ಎನ್ಸಿಇಆರ್ಟಿ ವಿನ್ಯಾಸಗೊಳಿಸಿದ ಶಿಕ್ಷಕರ ತರಬೇತಿಯ ಸಮಗ್ರ ಕಾರ್ಯಕ್ರಮವಾದ ನಿಷಿತಾ 2.0 ಕೋರ್ಸ್ ಅನ್ನು ಮೋದಿಯವರು ಉದ್ಘಾಟಿಸಲಿದ್ದಾರೆ.

ಸಫಾಲ್ (ಕಲಿಕೆಯ ಮಟ್ಟವನ್ನು ವಿಶ್ಲೇಷಿಸಲು ರಚನಾತ್ಮಕ ಮೌಲ್ಯಮಾಪನ), ಸಿಬಿಎಸ್ಇ ಶಾಲೆಗಳಲ್ಲಿ 3, 5 ಮತ್ತು 8 ನೇ ತರಗತಿಗಳಿಗೆ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಚೌಕಟ್ಟು ಮತ್ತು ಕೃತಕ ಬುದ್ಧಿಮತ್ತೆಗೆ ಮೀಸಲಾದ ವೆಬ್ಸೈಟ್ ಅನ್ನು ಈ ಸಂದರ್ಭದಲ್ಲಿ ಪ್ರಧಾನಿಯವರು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.