ನಾಸಿಕ್: ಇಂದಿಗೂ ದೇಶದ ಹಲವು ಗ್ರಾಮಗಳಲ್ಲಿ ಬೇಸಿಗೆ ಬಂತೆಂದರೆ ನೀರಿನದ್ದೇ ಚಿಂತೆ. ಕುಡಿಯುವ ನೀರಿಗೂ ಮೈಲುಗಟ್ಟಲೆ ದೂರ ನಡೆಯುವ ದುಃಸ್ಥತಿ. ಅಂತಹದ್ದೇ ಪರಿಸ್ಥಿತಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬೋರಿಚಿ ಗ್ರಾಮದಲ್ಲಿ ಎದುರಾಗಿದೆ.

ಗ್ರಾಮದಲ್ಲಿನ ಮೂರು ಬಾವಿಗಳು ಬತ್ತಿಹೋಗಿದ್ದು, ಒಂದರಲ್ಲಿ ಮಾತ್ರ ನೀರಿನ ಕುರುಹು ಇದೆ. ಅದೇ ನೀರನ್ನು ನಂಬಿಕೊಂಡು ಇಡೀ ಗ್ರಾಮಸ್ಥರು ಬದುಕುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಗ್ರಾಮದ ಉಪ ಸರಪಂಚ ಸೋಮನಾಥ್ ನಿಕುಲೆ, ‘ಊರಿನಲ್ಲಿ ಮೂರು ಬಾವಿಗಳಿವೆ, ಆದರೆ ಅವು ಸಂಪೂರ್ಣವಾಗಿ ಮಳೆನೀರಿನ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಜನವರಿ ಅಥವಾ ಫೆಬ್ರುವರಿವರೆಗೆ ಇರುತ್ತದೆ ಅದರ ನಂತರ ನೀರು ತರಲು ಸ್ಥಳೀಯರು 2 ರಿಂದ 3 ಕಿ.ಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಪ್ರಯಾಣ ಮಾಡಲು ಸಾಧ್ಯವಾಗದ ಜನರು 200 ಲೀಟರ್ ಬ್ಯಾರೆಲ್ಗೆ ₹60 ಪಾವತಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಇಲ್ಲಿನ ಮಹಿಳೆಯರು ನೀರನ್ನು ತೆಗೆಯಲು ಕಷ್ಟಪಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯರು ದೈನಂದಿನ ಅಗತ್ಯಗಳಿಗಾಗಿ ನೀರು ತರಲು ಕಲ್ಲಿನ ಗೋಡೆಗಳನ್ನು ಹತ್ತಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಹಗ್ಗವನ್ನು ಬಳಸಿ ಒಬ್ಬರು ಬಾವಿಗೆ ಇಳಿಯುತ್ತಾರೆ. ಅಲ್ಲಿ ಜಿನುಗುವ ನೀರನ್ನು ಮರದ ಎಲೆಯ ಮೂಲಕ ತುಂಬಿಸುತ್ತಾರೆ. ಮೇಲಿದ್ದವರು ಅದನ್ನು ಎತ್ತಿಕೊಳ್ಳುವ ದೃಶ್ಯ ವಿಡಿಯೊದಲ್ಲಿದೆ.

‘ಜಲ ಜೀವನ್ ಮಿಷನ್ನಡಿ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು, ಆದರೆ ಅದೂ ಅರ್ಧದಲ್ಲೇ ಸ್ಥಗಿತಗೊಂಡಿದೆ. ನೀರಿನ ಸಮಸ್ಯೆಯ ಪರಿಣಾಮ ಊರಿನ ಯಾವ ಯುವಕರಿಗೂ ಹೆಣ್ಣು ಕೊಡಲು ಒಪ್ಪುತ್ತಿಲ್ಲ. ಹೀಗಾಗಿ 30 ವರ್ಷವಾದರೂ ಯುವಕರು ಮದುವೆಯಾಗದೆ ಉಳಿದಿದ್ದಾರೆ. ನೀರಿಗಾಗಿ ಗ್ರಾಮದವರು ಮನೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ನಿಕುಲೆ ಅಳಲು ತೋಡಿಕೊಂಡಿದ್ದಾರೆ.

‘ಎರಡು ಬಿಂದಿಗೆ ನೀರಿಗಾಗಿ ಕಿಲೋಮೀಟರ್ಗಟ್ಟಲೆ ನಡೆದು ಸಾಗಬೇಕು. ಆ ನೀರು ಕೂಡ ಶುದ್ಧ ಇರುವುದಿಲ್ಲ, ಅದನ್ನು ಕುಡಿದು ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ನಮಗೆ ಸಹಾಯ ಮಾಡಲಿದೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ’ ಎಂದು ಗ್ರಾಮದ ಮಹಿಳೆಯೊಬ್ಬರು ನೋವು ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.