ಪಣಜಿ: ಭಾರತೀಯ ನೌಕಾಪಡೆಯ ಸ್ವಾವಲಂಬನೆಯು ದೇಶವು 5 ಲಕ್ಷ ಕೋಟಿ ಆರ್ಥಿಕತೆಯತ್ತ ಸಾಗಲು ಅನುವು ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸೋಮವಾರ ಹೇಳಿದರು.

ಭಾರತೀಯ ನೌಕಾಪಡೆಯ ವೈಮಾನಿಕ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಣಾ ಸಲಕರಣೆಗಳ ಆಮದುಗಳ ಮೇಲೆ ಅವಲಂಬಿತವಾಗಿರುವಾಗ ಯಾವುದೇ ದೇಶವು ಆರ್ಥಿಕ ಅಥವಾ ಪ್ರಾದೇಶಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂದು ಹೇಳಿದರು.

‘ಭಾರತೀಯ ನೌಕಾಪಡೆಯು ಸ್ವದೇಶೀಕರಣದಲ್ಲಿ ಮುಂಚೂಣಿಯಲ್ಲಿದೆ. ಇದು ನೌಕಾಪಡೆಯ ಪ್ರಸ್ತುತ ಮತ್ತು ಭವಿಷ್ಯದ ಯೋಜನೆಗಳಲ್ಲಿ ಪ್ರತಿಫಲಿಸುತ್ತಿದೆ. ಇದು ಸ್ವಾವಲಂಬಿಯಾಗಿ ನಡೆಯಲಿದೆ. ಭಾರತೀಯ ನೌಕಾಪಡೆಯ ವೈಮಾನಿಕ ಘಟಕವು ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ ಭಾರತ್’ ದೃಷ್ಟಿಕೋನದ ಅನುಸಾರವಾಗಿ, ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಅನುಗುಣವಾಗಿ ಸ್ಥಿರ ಪ್ರಗತಿ ಸಾಧಿಸಿದೆ’ ಎಂದು ಕೋವಿಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.