ನವದೆಹಲಿ: ನಕ್ಸಲ್ ಮುಖಂಡ ನಂಬಾಲಾ ಕೇಶವರಾವ್ (ಬಸವರಾಜು) ಸೇರಿದಂತೆ 27 ಮಾವೋವಾದಿಗಳ ಹತ್ಯೆ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿಪಿಐ ಬುಧವಾರ ಒತ್ತಾಯಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ಗೃಹ ಸಚಿವ ಅಮಿತ್ ಶಾ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ ಆಗ್ರಹಿಸಿದ್ದಾರೆ.

‘ಕಾನೂನಾತ್ಮಕವಾಗಿ ಬಂಧಿಸುವ ಬದಲು ಹತ್ಯೆ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದೇಶ ಇಟ್ಟಿರುವ ನಂಬಿಕೆಯ ಕುರಿತೇ ಕಳವಳ ವ್ಯಕ್ತವಾಗಿದೆ. ಛತ್ತೀಸಗಢದಲ್ಲಿ ಹಿರಿಯ ಮಾವೋವಾದಿ ಸೇರಿದಂತೆ ಬಹಳಷ್ಟು ಆದಿವಾಸಿಗಳನ್ನು ಸದ್ದಿಲ್ಲದೆ ಹತ್ಯೆ ಮಾಡಲಾಗಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯ ಹೆಸರಿನಲ್ಲಿ ಸರ್ಕಾರವು ಕಾನೂನು ಬಾಹಿರ ಕ್ರಮ ಕೈಗೊಂಡಿರುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ’ ಎಂದು ರಾಜಾ ಆರೋಪಿಸಿದ್ದಾರೆ.
.Chhattisgarh Encounter: ನಕ್ಸಲ್ ನಾಯಕ ಬಸವರಾಜು ಸೇರಿದಂತೆ 27 ಮಂದಿಯ ಹತ್ಯೆ.
‘ಗುಪ್ತಚರ ಇಲಾಖೆ ಮೂಲಕ ನಕ್ಸಲ್ ಮುಖಂಡನ ಇರುವಿಕೆಯ ಕುರಿತು ಖಚಿತ ಮಾಹಿತಿ ಇದ್ದಲ್ಲಿ, ಆತನನ್ನು ಕಾನೂನಾತ್ಮಕವಾಗಿ ಏಕೆ ಬಂಧಿಸಿಲ್ಲ? ಸಂವಿಧಾನ ಖಾತರಿಪಡಿಸುವ ಕಾರ್ಯವಿಧಾನವನ್ನು ಏಕೆ ಪಾಲಿಸಿಲ್ಲ? ಆಪರೇಷನ್ ಕಾಗರ್ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

‘ಛತ್ತೀಸಗಢದ ಜನತೆ ಹಾಗೂ ಇಡೀ ಭಾರತಕ್ಕೆ ಸತ್ಯ ತಿಳಿಯಬೇಕಾಗಿದೆ. ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ ನ್ಯಾಯ ನೀಡುವ ಅಥವಾ ಮರಣದಂಡನೆ ನೀಡುವ ವ್ಯವಸ್ಥೆಯನ್ನು ಸರ್ಕಾರ ವಹಿಸಿಕೊಳ್ಳಲು ಅವಕಾಶವಿಲ್ಲ. ಈ ಅನ್ಯಾಯದ ಕುರಿತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಹಾಗೂ ಪ್ರಗತಿಪರ ಚಿಂತಕರು ತಮ್ಮ ಧ್ವನಿ ಎತ್ತಬೇಕಿದೆ’ ಎಂದು ರಾಜ ಆಗ್ರಹಿಸಿದ್ದಾರೆ.

ಸಿಪಿಐಎಂನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಂಬಾಳ ಕೇಶವರಾವ್ (ಬಸವರಾಜು) ಅವರು ನಕ್ಸಲ್ ಚಳವಳಿಯ ಪ್ರಮುಖ ನಾಯಕರಾಗಿದ್ದರು. ಛತ್ತೀಸಗಢದಲ್ಲಿ ಬಸವರಾಜು ಸಹಿತ 27 ನಕ್ಸಲರನ್ನು ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.

ನಕ್ಸಲ್ವಾದದ ವಿರುದ್ಧ ಕಳೆದ ಮೂರು ದಶಕಗಳಿಂದ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ನಾಯಕನೊಬ್ಬನನ್ನು ಕೊಲ್ಲಲಾಗಿದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.