ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಜಿತ್ ಪವಾರ್; ಜಾತಿಗಣತಿಗೆ ಬೆಂಬಲ

Published 22 ಏಪ್ರಿಲ್ 2024, 12:09 IST
Last Updated 22 ಏಪ್ರಿಲ್ 2024, 12:09 IST
ಅಕ್ಷರ ಗಾತ್ರ

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಅವರು ಲೋಕಸಭೆ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು, ಜಾತಿಗಣತಿ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪ್ರಣಾಳಿಕೆ ಬಿಡುಗಡೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿವಂಗತ ಯಶವಂತರಾವ್ ಚವಾಣ್ ಅವರಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಲಾಗುವುದು ಎಂದರು.

‘ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ಮನುಷ್ಯನಾಗಿ ಬದುಕುವ ಹಕ್ಕನ್ನು ನಮ್ಮ ಪಕ್ಷ ಗೌರವಿಸುತ್ತದೆ. ಏಕತೆ ಮತ್ತು ಸಮಾನತೆಯನ್ನು ಬೆಂಬಲಿಸುತ್ತದೆ. ‘ಜಗತ್ತಿಗೆ ಪ್ರೀತಿಯನ್ನು ಅರ್ಪಿಸುವುದೇ ನಿಜವಾದ ಧರ್ಮ’ ಎಂಬ ಸಮಾಜ ಸುಧಾರಕ ಸಾನೆ ಗುರೂಜಿ ಅವರ ಹೇಳಿಕೆಯಲ್ಲಿ ಎನ್‌ಸಿಪಿ ನಂಬಿಕೆ ಇಟ್ಟಿದೆ. ಸಮಾಜದ ವಂಚಿತ ಮತ್ತು ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಾತಿಗಣತಿಗೆ ನಾವು ಒತ್ತಾಯಿಸುತ್ತೇವೆ’ ಎಂದರು.

‘ರಾಜ್ಯದ ಉರ್ದು ಮಾಧ್ಯಮ ಶಾಲೆಗಳಿಗೆ ಭಾಗಶಃ ಇಂಗ್ಲಿಷ್ ಮಾಧ್ಯಮ ಸ್ಥಾನಮಾನ ದೊರಕಿಸುವುದು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಪಕ್ಷದ ಇತರ ಬೇಡಿಕೆಗಳಾಗಿವೆ’ ಎಂದು ಅವರು ಹೇಳಿದರು.

ಎನ್‌ಸಿಪಿಯು ಶಿವಸೇನೆ(ಶಿಂದೆ ಬಣ) ಮತ್ತು ಬಿಜೆಪಿಯನ್ನೊಳಗೊಂಡ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT