ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ 2.0: ಸ್ವಯಂ ಉದ್ಯೋಗಿಗಳಿಗೆ ಹಬ್ಬ

ವಾಹನ, ಗೃಹೋಪಕರಣ ದುರಸ್ತಿ ಮಾಡಬೇಕೇ? ಏಪ್ರಿಲ್ 20ರಿಂದ ಸುಗಮವಾಗಲಿದೆ ಕೆಲಸ
Last Updated 15 ಏಪ್ರಿಲ್ 2020, 10:32 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್ ಉಪಕರಣ, ವಾಹನ, ಕಂಪ್ಯೂಟರ್‌ಗಳ ದುರಸ್ತಿ ಮಾಡಿಸುವುದು ಲಾಕ್‌ಡೌನ್‌ನ ಎರಡನೇ ಅವಧಿಯಲ್ಲಿ ಸುಗಮವಾಗಲಿದೆ. ಸ್ವ ಉದ್ಯೋಗ ಮಾಡುತ್ತಿರುವ ಟೆಕ್ನಿಷಿಯನ್‌ಗಳು ಏಪ್ರಿಲ್ 20ರಿಂದ ತಮ್ಮ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸರ್ಕಾರ ಹೇಳಿದೆ.

ಎರಡನೇ ಅವಧಿಯ ಲಾಕ್‌ಡೌನ್‌ಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗದರ್ಶಿಯಲ್ಲಿ ಸ್ವ ಉದ್ಯೋಗ ನಡೆಸುತ್ತಿರುವ ಕೆಲವರಿಗೆ ವಿನಾಯಿತಿ ನೀಡಲಾಗಿದೆ. ಎಲೆಕ್ಟ್ರಿಷಿಯನ್, ಪ್ಲಂಬರ್‌, ಮೋಟಾರು ವಾಹನ ದುರಸ್ತಿಪಡಿಸುವವರು, ಬಡಗಿಗಳು, ಐಟಿ ಮೆಕ್ಯಾನಿಕ್‌ಗಳು ಸೇರಿದಂತೆ ಹಲವರಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

21 ದಿನಗಳ ಲಾಕ್‌ಡೌನ್ ವೇಳೆ ಜನರು ಗೃಹೋಪಕರಣ ಮತ್ತು ಇತರ ಅಗತ್ಯ ಉಪಕರಣಗಳನ್ನುದುರಸ್ತಿ ಮಾಡಿಸಲಾಗದೇ ಸಮಸ್ಯೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ. ಬೇಸಿಗೆಯಾಗಿರುವುದರಿಂದ ಏರ್–ಕಂಡೀಷನರ್‌ಗಳ ಸರ್ವೀಸ್‌ ಮಾಡಿಸಿಕೊಳ್ಳಬೇಕೆಂಬ ಬೇಡಿಕೆಗಳಿವೆ. ಇಂತಹ ಸೇವೆಗಳಿಗೆ ಏಪ್ರಿಲ್ 20ರಿಂದ ಅನುಮತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿರ್ಧಾರದಿಂದಾಗಿ ಕೆಲವು ಸ್ವ ಉದ್ಯೋಗಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದರೆ ಟ್ಯಾಕ್ಸಿ, ಕ್ಯಾಬ್, ಆಟೊ ರಿಕ್ಷಾ ಮತ್ತಿತರ ಸೇವೆ ಒದಗಿಸುವವರ ಸಂಕಷ್ಟ ಮುಂದುವರಿಯಲಿದೆ. ಲಾಕ್‌ಡೌನ್ ಸಂಬಂಧಿತ ಹೊಸ ಮಾರ್ಗದರ್ಶಿಯಲ್ಲಿಯೂ ಸಾರಿಗೆ ವ್ಯವಸ್ಥೆ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ.

ಸೈಕಲ್ ರಿಕ್ಷಾಗಳ ಕಾರ್ಯಾಚರಣೆಗೂ ಅನುಮತಿ ನೀಡಲಾಗಿಲ್ಲ. ಜನ ಸಂಚಾರ ಇರದಂತೆ ನೋಡಿಕೊಳ್ಳುವ ಸಲುವಾಗಿ ಸಾರ್ವಜನಿಕ ಸಾರಿಗೆಯನ್ನು ಈಗಾಗಲೇ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT