ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ: ‘ಬೆಳೆ ಪರಿಶೀಲನೆಗೆ ಹೊಸ ಆ್ಯಪ್‌’

Last Updated 13 ಫೆಬ್ರುವರಿ 2022, 11:02 IST
ಅಕ್ಷರ ಗಾತ್ರ

ಸೋಲಾಪುರ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಸಾಹತು ಆಯುಕ್ತ ನಿರಂಜನ್ ಸುಧಾಂಶು ಅವರು ಸಭೆ ನಡೆಸಿ, ಪಹಣಿ ಉತಾರೆಗಳ ಗಣಕೀಕರಣದ ಕುರಿತು ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿಯೇತರ ಭೂಮಿಯನ್ನು ಸರ್ವೆ ಮಾಡಲಾಗಿದೆ. ಆದರೆ ಪಹಣಿ ಉತಾರೆಗಳು ಇರುವುದರಿಂದ ಪ್ರಾಪರ್ಟಿ ಕಾರ್ಡ್‌ಗಳು ಸಿದ್ಧವಾಗುತ್ತಿಲ್ಲ. ಪ್ರಸ್ತುತ ಎಲ್ಲ ಕೃಷಿಯೇತರ ಭೂಮಿಗಳ ಪಹಣಿ ಉತಾರೆಗಳನ್ನು ಬಂದ್ ಮಾಡಿ, ಪ್ರಾಪರ್ಟಿ ಕಾರ್ಡ್ ಮಾಡುವ ಕೆಲಸ ನಡೆಯುತ್ತಿದೆ. ನಾಗರಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕೃಷಿಯೇತರ ಜಮೀನುಗಳ ಉತಾರೆಗಳನ್ನು ಕೆಲ ಸಮಯದವರೆಗೆ ಪೋರ್ಟಲ್‌ನಲ್ಲಿ ಇರಿಸಬೇಕು’ ಎಂದು ಸೂಚಿಸಿದರು.

‘ಎಂಐಎಸ್ ಪೋರ್ಟಲ್‌ನಲ್ಲಿ ಎದುರಾಗುವ ಸಮಸ್ಯೆಗಳನ್ನು ಈಗಾಗಲೇ ಗುರುತಿಸಿ ಪರಿಹರಿಸಲಾಗಿದೆ. ಮಹಾ ಭೂಮಿ ಪೋರ್ಟಲ್‌ನಲ್ಲಿ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಿ ನವೀಕರಿಸಬೇಕು. ಇ-ಕ್ರಾಪ್ ಪರಿಶೀಲನೆಗೆ ಹೊಸ ಆ್ಯಪ್ ಬಿಡುಗಡೆ ಮಾಡಲಾಗುವುದು. ಹಿಂದಿನ ಅಪ್ಲಿಕೇಶನ್‌ನಲ್ಲಿಕೆಲವು ದೋಷಗಳು ಇರುವುದರಿಂದ ಹೊಸ ಅಪ್ಲಿಕೇಶನ್ ರಚಿಸಲಾಗುತ್ತದೆ. ಇದರಲ್ಲಿ ರೈತರು ಸ್ವಂತ ಬೆಳೆ ಮಾಹಿತಿಯನ್ನು ತುಂಬುತ್ತಾರೆ. ಜಿಯೋ ಟ್ಯಾಗ್ ಮಾಡಿರುವುದರಿಂದ ಹೊಲದ ಬಳಿಯೇ ಫೊಟೊ ತೆಗೆದು ಅಪ್‌ಲೋಡ್ ಮಾಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಿಲಿಂದ್ ಶಂಬರ್ಕರ್, ಭೂ ದಾಖಲೆಗಳ ಉಪನಿರ್ದೇಶಕ ಕಿರಣ ತಾವರೆಜ್, ಸಹಾಯಕ ಜಿಲ್ಲಾಧಿಕಾರಿ ಮನೀಷಾ ಅವ್ಹಾಳೆ, ನಿವಾಸಿ ಜಿಲ್ಲಾಧಿಕಾರಿ ಶಮಾ ಪವಾರ, ಜಿಲ್ಲಾ ಭೂದಾಖಲೆಗಳ ಅಧೀಕ್ಷಕ ಹೇಮಂತ ಸಾನಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT