ನವದೆಹಲಿ(ಪಿಟಿಐ): ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಚಟುವಟಿಕೆ ಆರಂಭಿಸಿದ್ದಾರೆ. ಸೋಮವಾರ ಅಧಿಕಾರ ಸ್ವೀಕರಿಸಿದ್ದ ಅವರು, ಮಂಗಳವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರನ್ನು ಭೇಟಿಮಾಡಿದರು.

ಹಾಲಿ ಮತ್ತು ಮಾಜಿ ಸಚಿವರು, ಪಕ್ಷದ ವಿವಿಧ ವಿಭಾಗಗಳ ಪ್ರಮುಖರು ಮತ್ತು ನಬಿನ್ ಅವರ ತವರು ರಾಜ್ಯ ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಪಕ್ಷದ ಮುಖಂಡರು, ನೂತನ ಕಾರ್ಯಾಧ್ಯಕ್ಷರನ್ನು ಭೇಟಿ ಮಾಡಿ ಶುಭಕೋರಿದರು. ಪಕ್ಷದ ವಿವಿಧ ವಿಭಾಗಗಳ ಉಸ್ತುವಾರಿಗಳು, ಕಚೇರಿ ಸಿಬ್ಬಂದಿ ಜೊತೆ ನಬಿನ್ ಅವರು ಚರ್ಚೆ ನಡೆಸಿದರು.

ಮಂಗಳವಾರ ಬೆಳಗ್ಗೆ ಕಚೇರಿಗೆ ಬಂದ ನೂತನ ಕಾರ್ಯಾಧ್ಯಕ್ಷರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ವಿನೋದ್ ತಾವ್ಡೆ, ದುಷ್ಯಂತ್ ಗೌತಮ್, ಸಂಜಯ್ ಮಾಯುಖ್ ಅವರು ಸ್ವಾಗತಿಸಿದರು.

ಕೇಂದ್ರ ಸಚಿವ ಭೂಪಿಂದರ್ ಯಾದವ್, ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್, ಬಿಹಾರದ ಸಚಿವರಾದ ದಿಲೀಪ್ ಜೈಸ್ವಾಲ್, ಅರುಣ್ ಶಂಕರ್ ಪ್ರಸಾದ್ ಸೇರಿ ಹಲವು ಗಣ್ಯರು ನಬಿನ್ ಅವರನ್ನು ಅಭಿನಂದಿಸಿದರು.

ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನಿವಾಸಗಳಿಗೆ ತೆರಳಿ ನಬಿನ್ ಆಶೀರ್ವಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.