ನವದೆಹಲಿ: ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 2,22,315ಕ್ಕೆ ಇಳಿಕೆಯಾಗಿದ್ದು, ಇದು 38 ದಿನಗಳಲ್ಲಿ ವರದಿಯಾದ ಅತಿ ಕಡಿಮೆ ದೈನಂದಿನ ಪ್ರಕರಣಗಳಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2,67,52,447ಕ್ಕೆ ಏರಿಕೆಯಾಗಿದೆ. ಒಟ್ಟು ಮೃತರ ಸಂಖ್ಯೆಯು 3 ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯಸೋಮವಾರ ತಿಳಿಸಿದೆ.

‘ಹೊಸದಾಗಿ 4,454 ಮಂದಿ ಮೃತಪಟ್ಟಿದ್ದು, ಈ ಮೂಲಕ ಒಟ್ಟು ಸಾವಿನ ಸಂಖ್ಯೆಯು3,03,720ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 27,20,716ಕ್ಕೆ ಇಳಿಕೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಪೈಕಿ ಶೇಕಡ 10.17 ಪಾಲನ್ನು ಹೊಂದಿದೆ. ಇದೇ ವೇಳೆ ದೇಶದ ಚೇತರಿಕೆ ಪ್ರಮಾಣವು ಶೇಕಡ 88.69ಕ್ಕೆ ಹೆಚ್ಚಿದೆ. ಈವರೆಗೆ 2,37,28,011 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ದೇಶದ ಸಾವಿನ ಪ್ರಮಾಣವು ಶೇಕಡ 1.14ಕ್ಕೆ ಹೆಚ್ಚಿದೆ’ ಎಂದು ಸಚಿವಾಲಯವು ಹೇಳಿದೆ.

ಭಾನುವಾರದವರೆಗೆ ಒಟ್ಟು 33.05 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮಹಾರಾಷ್ಟ್ರ(1,320), ತಮಿಳುನಾಡು(422), ಉತ್ತರ ಪ್ರದೇಶ(231), ಪಂಜಾಬ್(192), ದೆಹಲಿ(189), ಕೇರಳ(188), ಪಶ್ಚಿಮ ಬಂಗಾಳ(156), ಬಿಹಾರ( 107), ಆಂಧ್ರಪ್ರದೇಶ(104) ಸೇರಿದಂತೆ ದೇಶದಲ್ಲಿ 4,454 ಮಂದಿ ಹೊಸದಾಗಿ ಮೃತಪಟ್ಟಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.