ತಿರುವನಂತಪುರ: ‘ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ ಪ್ರದೇಶದ ಬಾವಲಿಗಳಲ್ಲಿ ನಿಫಾ ಸೋಂಕು ಇರುವುದು ದೃಢಪಟ್ಟಿದೆ. ಐದು ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 27 ಬಾವಲಿಗಳ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಈ ಪೈಕಿ ಆರು ಬಾವಲಿಗಳಲ್ಲಿ ಪ್ರತಿಕಾಯ ಇರುವುದ ಪತ್ತೆಯಾಗಿದೆ’ ಎಂದು ಆರೋಗ್ಯ ಸಚಿವೆ ವೀನಾ ಜಾರ್ಜ್ ಮಾಹಿತಿ ನೀಡಿದ್ದಾರೆ.