ತಿರುಚಿರಪಳ್ಳಿ: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಿಸಾರ್ ಉಪಗ್ರಹವು ಜಾಗತಿಕ ಸಮುದಾಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರು ಶನಿವಾರ ಹೇಳಿದ್ದಾರೆ.

‘ನಿಸಾರ್ ಉಪಗ್ರಹ ಯೋಜನೆಯು ಇಸ್ರೊ ಮತ್ತು ನಾಸಾದ ನಡುವಿನ ದಶಕಗಳ ತಾಂತ್ರಿಕ ಸಹಕಾರದ ಪ್ರತಿಫಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಎರಡು ರೇಡಾರ್ ಉಪಗ್ರಹವು ಏಕಕಾಲಕ್ಕೆ ಉಡಾವಣೆಗೊಳ್ಳುತ್ತಿರುವುದು ಇದೇ ಮೊದಲು. ಭೂಮಿಯ ಸಮೀಕ್ಷೆಗಾಗಿ ಇಸ್ರೊ–ನಾಸಾ ಒಟ್ಟಾಗಿ ಕೈಗೊಳ್ಳುತ್ತಿರುವ ಮೊದಲ ಯೋಜನೆ ಇದಾಗಿದೆ’ ಎಂದು ಇಸ್ರೊ ತಿಳಿಸಿದೆ.

‘ಈ ಬಾಹ್ಯಾಕಾಶ ಯೋಜನೆಯು ನಮಗೆ ಮುಖ್ಯವಾಗಿದೆ. ಭಾರತದ ನೆಲದಿಂದ 102ನೇ ಉಡಾವಣೆಯು ಜುಲೈ 30 ರಂದು ನಡೆಯಲಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.