ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್ಡಿಎ ಮೈತ್ರಿಕೂಟದಲ್ಲಿ ಉಳಿಯುವುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಭರವಸೆ ನೀಡಿದ್ದಾರೆ.

ಈ ಹಿಂದೆ ಆರ್ಜೆಡಿ -ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಅಧಿಕಾರ ಹಂಚಿಕೊಂಡ ಸಂದರ್ಭವನ್ನೂ ಮೆಲುಕು ಹಾಕಿದ ನಿತೀಶ್ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಎಲ್ಲಾ ಪಕ್ಷಗಳು ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿ ರ್ಯಾಲಿಗಳನ್ನು ಆಯೋಜಿಸಲಾಗುತ್ತಿದೆ.
.ಭಾರತಕ್ಕೆ ಅಮೆರಿಕದ ಮುಖ್ಯ ವ್ಯಾಪಾರ ಸಮಾಲೋಚಕ: ನಾಳೆ ಮಾತುಕತೆ.ಗೆಳತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಕಿಡಿಗೇಡಿ ಭಾರತ-ನೇಪಾಳ ಗಡಿಯಲ್ಲಿ ಬಂಧನ!.
ಪೂರ್ಣಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ನಿತೀಶ್, 2005ರಲ್ಲಿ ಜೆಡಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಆ ಬಳಿಕ ನಮ್ಮದೇ ಪಕ್ಷದ ಕೆಲವು ನಾಯಕರ ಮಾತು ಕೇಳಿ ಮತ್ತೊಂದು ಮೈತ್ರಿಕೂಟದ ಭಾಗವಾಗಬೇಕಾಯಿತು ಎಂದು ಹೇಳಿದ್ದಾರೆ.

'ಅವರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿದ್ದ ವೇಳೆ ಎಂದಿಗೂ ನೆಮ್ಮದಿಯಾಗಿರಲಿಲ್ಲ. ಆ ಜನರು ಯಾವಾಗಲೂ ಕಿಡಿಗೇಡಿತನದಲ್ಲಿ ತೊಡಗಿದ್ದರು' ಎಂದು ನಿತೀಶ್ ಆರ್ಜೆಡಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಾನು ಈಗ ಎನ್ಡಿಎ ಮೈತ್ರಿಕೂಟಕ್ಕೆ ಹಿಂತಿರುಗಿದ್ದೇನೆ. ಇನ್ನು ಮುಂದೆ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ನಿತೀಶ್ ಪ್ರಧಾನಿ ಮೋದಿ ಎದುರು ಹೇಳಿದ್ದಾರೆ.
.ಮಾಲಿನ್ಯದಿಂದ ಐತಿಹಾಸಿಕ ಕೆಂಪು ಕೋಟೆಗೆ ಹೆಚ್ಚಿದ ಹಾನಿ: ಅಧ್ಯಯನ .ಉಡುಪಿಯ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ.Bihar Election 2025 | ₹36,000 ಕೋಟಿ ಮೊತ್ತದ ಯೋಜನೆಗಳಿಗೆ ಮೋದಿ ಚಾಲನೆ.ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.