ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮರಳುವ ಯೋಚನೆಯಿಲ್ಲ: ಗುಲಾಮ್‌ ನಬಿ ಆಜಾದ್‌

Last Updated 30 ಡಿಸೆಂಬರ್ 2022, 18:52 IST
ಅಕ್ಷರ ಗಾತ್ರ

ನವದೆಹಲಿ: ’ಕಾಂಗ್ರೆಸ್‌ ಪಕ್ಷಕ್ಕೆ ಮರಳುವ ಯೋಚನೆಯಿಲ್ಲ’ ಎಂದುಹಿರಿಯ ರಾಜಕಾರಣಿ, ಡೆಮಾಕ್ರಟಿಕ್‌ ಆಜಾದ್‌ ಪಕ್ಷದ (ಡಿಎಪಿ) ಅಧ್ಯಕ್ಷ ಗುಲಾಮ್‌ ನಬಿ ಆಜಾದ್‌ ಶುಕ್ರವಾರ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್‌ ತೊರೆದಿದ್ದರು.

ಕಾಂಗ್ರೆಸ್‌ನಯಾವ ನಾಯಕರೂ ನನ್ನನ್ನು ಕರೆದಿಲ್ಲ. ಈ ರೀತಿಯ ಕತೆಗಳು ಮಾಧ್ಯಮಗಳಲ್ಲಿ ಹೇಗೆ ಹುಟ್ಟಿಕೊಂಡಿತು ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ಈ ರೀತಿಯ ಊಹಾ‍ಪೋಹಗಳನ್ನು ಹಬ್ಬಿಸಿದ್ದಾರೆ. ’ಏನೇ ಬರಲಿ ನಾವು ಇನ್ನೂ ಬಲಿಷ್ಠರಾಗುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT