ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾಗೋಷ್ಠಿ ಬಗ್ಗೆ ವಿಷಾದ ವ್ಯಕ್ತಪಡಿಸುವುದಿಲ್ಲ: ಚಲಮೇಶ್ವರ್

Last Updated 23 ಜೂನ್ 2018, 2:35 IST
ಅಕ್ಷರ ಗಾತ್ರ

ನವದೆಹಲಿ: ಕೆ.ಎಂ ಜೋಸೆಫ್ ಅವರಿಗೆ ಸಂಬಂಧಿಸಿದ ಕಡತಗಳನ್ನು ಹಿಂದಿರುಗಿಸುವಾಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಿದ ಮಾತುಗಳು ಸಂಪೂರ್ಣ ಅಸಮರ್ಥನೀಯ ಎಂದು ಶುಕ್ರವಾರ ನಿವೃತ್ತರಾದ ಸುಪ್ರೀಂಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಚಲಮೇಶ್ವರ್ ಹೇಳಿದ್ದಾರೆ.

ಉತ್ತರಾಖಂಡ್ ಮುಖ್ಯ ನ್ಯಾಯಾಧೀಶ ಕೆ. ಎಂ. ಜೋಸೆಫ್ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಬೇಕು ಎಂಬುದೇ ನನ್ನ ಪ್ರಾರ್ಥನೆ ಮತ್ತು ಆಗ್ರಹ. ಹಲವಾರು ಬಾರಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಿದೆ.ಸುಪ್ರೀಂಕೋರ್ಟ್ ಕೊಲಿಜಿಯಂ ಒಗ್ಗಟ್ಟಾಗಿ ಈ ಬಗ್ಗೆಶಿಫಾರಸು ಮಾಡಿದ್ದೆವು. ಈ ವಿಷಯದಲ್ಲಿ ಇನ್ನು ಮುಂದೆಯೂ ಕೊಲಿಜಿಯಂ ಹೋರಾಟ ಮುಂದುವರಿಯುತ್ತದೆ. ಜೋಸೆಫ್ ದಕ್ಷ ನ್ಯಾಯಾಧೀಶರಾಗಿದ್ದಾರೆ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡಿದ ಚಲಮೇಶ್ವರ್ ಹೇಳಿದ್ದಾರೆ.

ಜನವರಿಯಲ್ಲಿ ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಎಂ ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಿಆದೇಶ ಹೊರಡಿಸಿತ್ತು.ಈ ನಿರ್ಧಾರವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ನಾಲ್ಕು ತಿಂಗಳ ಬಳಿಕ ಕೊಲಿಜಿಯಂ ತನ್ನ ನಿರ್ಧಾರವವನ್ನು ಮರುಪರಿಶೀಲಿಸಬೇಕು ಎಂದಿತ್ತು.

ಸುಪ್ರೀಂಕೋರ್ಟ್ ಕಾರ್ಯಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ತಿಂಗಳುಗಟ್ಟಲೆ ಸಮಯಾವಕಾಶ ತೆಗೆದುಕೊಳ್ಳಬಾರದು. ಹಾಗಾದರೆ ಅಲ್ಲಿ ಖಾಲಿ ಸ್ಥಾನ ಉಳಿದುಕೊಳ್ಳುವ ಸಾಧ್ಯತೆ ಇದೆ. ಹೊಸ ವ್ಯಕ್ತಿಗಳ ನೇಮಕಕ್ಕೂ ಇದು ಪರಿಣಾಮ ಬೀರಬಹುದು ಎಂದಿದ್ದಾರೆ ಚಲಮೇಶ್ವರ್.

ನಿವೃತ್ತಿ ಸಂದರ್ಭದಲ್ಲಿ ಚಲಮೇಶ್ವರ್ ಅವರು ದಿ ಪ್ರಿಂಟ್ ಜಾಲತಾಣಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಜನವರಿ 12ರ ಸುದ್ದಿಗೋಷ್ಠಿ ಬಗ್ಗೆ?
2018 ಜನವರಿ 12ರಂದು ನಡೆದ ಪತ್ರಿಕಾಗೋಷ್ಠಿಬಗ್ಗೆ ಯಾವುದೇ ಕಾರಣಕ್ಕೂ ವಿಷಾದ ವ್ಯಕ್ತಪಡಿಸುವುದಿಲ್ಲ.ಯಾಕೆ ಸುದ್ದಿಗೋಷ್ಠಿ ಕರೆದೆವು ಎಂಬುದರ ಬಗ್ಗೆಯೂ ನಾನು ಪ್ರತಿಕ್ರಿಯಿಸುವುದಿಲ್ಲ, ಜನರು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು.ಇಲ್ಲಿ ಪ್ರತಿ ವ್ಯಕ್ತಿಯ ನಡೆಯನ್ನೂ ವಿಮರ್ಶಿಸಲಾಗುತ್ತದೆ.ಅದಕ್ಕೆ ಸ್ವಾತಂತ್ರ್ಯವೂ ಇದೆ. ಪತ್ರಿಕಾಗೋಷ್ಠಿ ಬಗ್ಗೆ ವಿಷಾದ ವ್ಯಕ್ತಪಡಿಸಬೇಕೆಂದು ಯಾರಾದರೂ ಬಯಸುವುದಾದರೆ ಕ್ಷಮಿಸಿ, ನಾನು ಹಾಗೆ ಮಾಡಲಾರೆ.ಪತ್ರಿಕಾಗೋಷ್ಠಿ ಕರೆದ ನಂತರ ನಿವೃತ್ತ ಮೂರ್ತಿಗಳಲ್ಲಿ ಹೆಚ್ಚಿನವರು ಕರೆ ಮಾಡಿ ನಮಗೆ ಬೆಂಬಲ ಸೂಚಿಸಿದ್ದರು. ಆದರೆ ಯಾರೂ ಬಹಿರಂಗವಾಗಿ ಮಾತನಾಡಲು ಮುಂದಾಗಲಿಲ್ಲ.

ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದೆಯೇ?
ಈ ಪ್ರಶ್ನೆಗೆ ಹಾಗೇನಿಲ್ಲ ಎಂದು ಉತ್ತರಿಸಿದ ಅವರು, ತುರ್ತು ಪರಿಸ್ಥಿತಿಯ ದಿನಗಳತ್ತ ಮಾತು ಹೊರಳಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಕಾನೂನು ವಿದ್ಯಾರ್ಥಿಯಾಗಿದ್ದೆ. ಎಲ್ಲ ಯುವಕರಿಗೂ ಆಗುವಂತೆ ನನಗೂ ದುಃಖವಾಗಿತ್ತು. ಈ ಬಗ್ಗೆ ನಾನು ಹೆಚ್ಚು ಚಿಂತಿತನಾಗಿದ್ದೆ.ಆ ವೇಳೆ ನನಗೆ ಸಂವಿಧಾನಾತ್ಮಕ ಕಾನೂನು ವಿಷಯವನ್ನು ಬೋಧಿಸುತ್ತಿದ್ದ ನನ್ನ ಗುರುಗಳಾದ ಗೋಪಾಲಕೃಷ್ಣ ಶಾಸ್ತ್ರಿಗಳ ಬಳಿ ಹೋದೆ.ಅವರು ನನ್ನ ಪ್ರಶ್ನೆಗಳಿಗೆ ನಗುತ್ತಾ ಉತ್ತರಿಸಿ, ಯಂಗ್ ಮ್ಯಾನ್, ಇದೆಲ್ಲವೂ ಕಷ್ಟದ ದಿನಗಳೆಂದು ಗೊತ್ತು.ಆದರೆ ಹಿಟ್ಲರ್ ರೀತಿಯ ಕೆಲವು ಐತಿಹಾಸಿಕ ಘಟ್ಟದ ಬಗ್ಗೆ ನಿನಗೆ ಗೊತ್ತಿಲ್ಲ, ಅವನ ದುರಾಡಳಿತ ಅನುಭವಿಸಿದರಿಗಿಂತಲೂ ನಂತರದ ತಲೆಮಾರಿನವನು ನಾನು. ಯಾವುದೂ ಶಾಶ್ವತವಲ್ಲ, ಕಾಲ ಬದಲಾಗುತ್ತದೆ ಎಂದು ಹೇಳಿದ್ದನ್ನು ಚಲಮೇಶ್ವರ್ ನೆನಪಿಸಿಕೊಂಡಿದ್ದಾರೆ.

ಒಳಿತಿಗಾಗಿ ಕಾಲ ಬದಲಾಗುತ್ತಿದೆಯೇ ಎಂದು ಕೇಳಿದಾಗ ಒಳಿತಿಗಾಗಿ ಜನರು ಬದಲಾವಣೆ ಬಯಸುವುದಾದರೆ ಒಳಿತಿಗಾಗಿ ಕಾಲ ಬದಲಾಗುತ್ತದೆ.ಸ್ವರ್ಗದಿಂದ ಇಳಿದು ಬಂದು ಯಾರೂ ಬದಲಾವಣೆ ಮಾಡುವುದಿಲ್ಲ, ಅದನ್ನು ನಾವು ನಾವೇ ಮಾಡಿಕೊಳ್ಳಬೇಕು ಎಂದಿದ್ದಾರೆ.

ನಿಮ್ಮ ವೃತ್ತಿ ಜೀವನದ ಪರಮೋಚ್ಛ ಅಂಶ ಯಾವುದು?
ನಾನು ಸುಪ್ರೀಂಕೋರ್ಟ್ ನ 231 ಅಥವಾ 232ನೇ ನ್ಯಾಯಮೂರ್ತಿ ಇರಬಹುದು. ನಾನು ಹೋದ ನಂತರ ಸಾಕಷ್ಟು ಜನ ಬರುತ್ತಾರೆ.ನಾನು ಸ್ವೀಕರಿಸಿದ ಪ್ರತಿಜ್ಞೆಗೆ ತಕ್ಕಂತೆ ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಇದೇ ನನ್ನ ಪರಮೋಚ್ಚ ಸಂಗತಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT