ಚಂಡೀಗಢ: ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ ಬಲ್ವಿಂದರ್ ಸಿಂಗ್ ಅಲಿಯಾಸ್ ಬಿಲ್ಲಾನನ್ನು ಪಂಜಾಬ್‌ನ ಗುರುದಾಸಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಲ್ವಿಂದರ್ ಸಿಂಗ್‌ನನ್ನು ಬಂಧಿಸಲಾಗಿದ್ದು ಅವನನ್ನು ಅಸ್ಸಾಂ ಜೈಲಿಗೆ ಕಳುಹಿಸಲಾಗುವುದು ಎಂದು ಮಾದಕವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪಂಜಾಬ್ ಮೂಲದವನಾದ ಬಿಲ್ಲಾ, 1992ರಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಕ್ರಿಯನಾಗಿದ್ದ. ಪಾಕಿಸ್ತಾನದ ಡ್ರಗ್ಸ್ ಕಳ್ಳಸಾಗಣೆದಾರರ ಜೊತೆ ಸಂಪರ್ಕ ಹೊಂದಿದ್ದ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಿಲ್ಲಾನನ್ನು ಒಂದು ವರ್ಷದವರೆಗೆ ಜಾಮೀನು ಇಲ್ಲದೇ ಬಂಧನದಲ್ಲಿ ಇಟ್ಟು ವಿಚಾರಣೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.