ಬೆರಹಂಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತು ಸಂಸ್ಕೃತದಲ್ಲಿ ಮಹಾಕಾವ್ಯವನ್ನು ಒಡಿಯಾದ ಗಂಜಂ ಜಿಲ್ಲೆಯ ವಿದ್ವಾಂಸರೊಬ್ಬರು ರಚಿಸಿದ್ದಾರೆ.

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸೋಮನಾಥ ದಾಸ್ ಅವರು ‘ನರೇಂದ್ರ ಆರೋಹಣಂ’ ಎಂಬ ಶೀರ್ಷಿಕೆಯ 700 ಪುಟಗಳ ಮಹಾಕಾವ್ಯವನ್ನು ರಚಿಸಿದ್ದಾರೆ. ಈ ಕೃತಿಯನ್ನು ಗುಜರಾತ್ನ ವೆರಾವಲ್ನಲ್ಲಿರುವ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯ ಪ್ರಕಟಿಸಿದೆ. ಈ ಕೃತಿಯನ್ನು ವೆರಾವಲ್ನಲ್ಲಿರುವ ಯುವಜನೋತ್ಸವದಲ್ಲಿ ಬಿಡುಗಡೆ ಮಾಡಲಾಯಿತು.

ಪುಸ್ತಕವು 12 ಅಧ್ಯಾಯ ಹಾಗೂ 1,200 ಶ್ಲೋಕಗಳನ್ನು ಒಳಗೊಂಡಿದೆ. ಸಂಸ್ಕೃತದ ಈ ಶ್ಲೋಕಗಳಿಗೆ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ವಿವರಣೆ ನೀಡಲಾಗಿದೆ. ಇದರಲ್ಲಿ ಮೋದಿ ಅವರ ಜೀವನ ಯಾನ, ಬಾಲ್ಯ, ಗುಜರಾತ್ ಮುಖ್ಯಮಂತ್ರಿಯಾದ ಸಂದರ್ಭ ಹಾಗೂ 2ನೇ ಬಾರಿ ಪ್ರಧಾನಿಯಾದ ಅವಧಿಯವರೆಗಿನ ಘಟನೆಗಳನ್ನು ದಾಖಲಿಸಲಾಗಿದೆ.

‘ಗುಜರಾತ್ನ ಅತ್ಯಂತ ಸಾಧಾರಣ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ, ತಮ್ಮ ಬದುಕಿನಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡವರು. ಜಗತ್ತಿನಲ್ಲಿರುವ ಯುವಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಅವರ ಅಸಾಧಾರಣ ರಾಜಕೀಯ ಪಯಣ ಮತ್ತು ಬದುಕಿನ ಹೋರಾಟಗಳು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆಯಲಿವೆ. ಈ ಎಲ್ಲಾ ಕಾರಣಗಳಿಂದ ಅವರ ಜೀವನ ಮತ್ತು ಸಾಧನೆ ಕುರಿತು ಸಂಸ್ಕೃತದಲ್ಲಿ ಕೃತಿ ರಚಿಸಲು ನಾನು ನಿರ್ಧರಿಸಿದೆ’ ಎಂದು 48 ವರ್ಷದ ಸೋಮನಾಥ ತಿಳಿಸಿದ್ದಾರೆ.

ನಾಲ್ಕು ವರ್ಷದಲ್ಲಿ ಕೃತಿ ಪೂರ್ಣಗೊಳಿಸಲಾಯಿತು. ಸಂಸ್ಕೃತ ಸಾಹಿತ್ಯದ ಮೇರು ವ್ಯಕ್ತಿಗಳು, ಪ್ರಾಧ್ಯಾಪಕರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ನಾನು ಎಂದೂ ಭೇಟಿ ಮಾಡಿಲ್ಲ. ಆದರೆ, ಅವರ ಕುರಿತು ಈವರೆಗೂ ಪ್ರಕಟವಾಗಿರುವ ಹಲವು ಪುಸ್ತಕಗಳು, ನಿಯತಕಾಲಿಕೆಗಳು, ಅವರ ಭಾಷಣ ಮತ್ತು ‘ಮನ್ ಕೀ ಬಾತ್’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಧಾರವಾಗಿಟ್ಟುಕೊಂಡು ‘ನರೇಂದ್ರ ಆರೋಹಣಂ’ ರಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.