ಭುವನೇಶ್ವರ: ಚುನಾವಣಾ ಆಯೋಗವು ಇಲ್ಲಿನ ಪತ್ಕುರಾ ವಿಧಾನಸಭೆ ಚುನಾವಣೆ ದಿನಾಂಕವನ್ನು ಮೇ 19ಕ್ಕೆ ಮುಂದೂಡಿದೆ. ಈ ಕ್ಷೇತ್ರದ ಚುನಾವಣೆಯು ಏಪ್ರಿಲ್ 29ಕ್ಕೆ ನಿಗದಿಯಾಗಿತ್ತು. ಇಲ್ಲಿಂದ ಕಣಕ್ಕಿಳಿದಿದ್ದ ಬಿಜೆಡಿ ಅಭ್ಯರ್ಥಿ ಪ್ರಕಾಶ್ ಅಗರ್‌ವಾಲ್ ಅವರು ಮೃತಪಟ್ಟಿದ್ದರಿಂದ ಚುನಾವಣಾ ದಿನಾಂಕ ಬದಲಿಸಲಾಗಿದೆ.

ಮೇ 1 ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಎಂದುಆಯೋಗವು ಘೋಷಿಸಿದೆ.

‘ಬಿಜೆಡಿ ಅಭ್ಯರ್ಥಿ ಪ್ರಕಾಶ್ ಅಗರ್‌ವಾಲ್ ಅವರ ನಿಧನದಿಂದಾಗಿ ಪತ್ಕುರಾ ವಿಧಾನಸಭೆ ಚುನಾವಣೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಇದೀಗ ಚುನಾವಣಾ ಆಯೋಗದ ಆದೇಶದ ಮೇರೆಗೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಡಿಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು’ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.

‘ನಾಮಪತ್ರ ಸಲ್ಲಿಕೆಗೆ ಮೇ 1 ಕೊನೆ ದಿನವಾಗಿದ್ದು, ಈ ಹಿಂದೆ ನಿಗದಿಯಾಗಿರುವಂತೆ ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ’ ಎಂದೂ ತಿಳಿಸಿದ್ದಾರೆ.

ಹಿರಿಯ ನಾಯಕರಾಗಿದ್ದ ಅಗರ್‌ವಾಲ್ 2009 ಹಾಗೂ 2014ರಲ್ಲಿ ಎರಡು ಬಾರಿ ಪತ್ಕುರಾ ಕ್ಷೇತ್ರದಿಂದ ಶಾಸಕರಾಗಿ ಆಯ‌್ಕೆಯಾಗಿದ್ದರು. ಕೇಂದ್ರಪುರ ವಿಧಾನಸಭೆ ಕ್ಷೇತ್ರದಿಂದಲೂ 4ಬಾರಿ ಶಾಸಕರಾಗಿದ್ದ ಅವರು ಚಿಕಿತ್ಸೆಗಾಗಿ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.