ಆಕೆ ನನ್ನನ್ನು ಭೇಟಿಯಾಗಿದ್ದಳು. ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದೆ. ಕಾಲೇಜಿನ ಪ್ರಾಂಶುಪಾಲ ಸರಿಯಾಗಿ ಕೆಲಸ ಮಾಡಿಲ್ಲ
ಪ್ರತಾಪ್ ಸಾರಂಗಿ ಬಾಲೇಶ್ವರ ಸಂಸದ
ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಕಠಿಣ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ ಎಂದು ವಿದ್ಯಾರ್ಥಿನಿಯ ಕುಟುಂಬಕ್ಕೆ ನಾನು ಭರವಸೆ ನೀಡುತ್ತೇನೆ
ಮೋಹನ್ ಚರಣ್ ಮಾಝಿ ಒಡಿಶಾ ಮುಖ್ಯಮಂತ್ರಿ
‘ಮೌನ ಬೇಡ ಉತ್ತರ ಬೇಕು’ ಇದು ಆತ್ಮಹತ್ಯೆಯಲ್ಲ. ಬಿಜೆಪಿ ವ್ಯವಸ್ಥೆಯು ನಡೆಸಿರುವ ಯೋಜಿತ ಹತ್ಯೆ. ನ್ಯಾಯ ನೀಡುವ ಬದಲು ಆಕೆಯನ್ನು ಅವಮಾನಿಸಲಾಯಿತು ಬೆದರಿಸಲಾಯಿತು. ಮೋದಿ ಅವರೇ ಒಡಿಶಾ ಅಥವಾ ಮಣಿಪುರ ಇರಬಹುದು– ಈ ದೇಶದ ಹೆಣ್ಣುಮಕ್ಕಳು ಸುಟ್ಟು ಹೋಗುತ್ತಿದ್ದಾರೆ ಕುಸಿದು ಹೋಗುತ್ತಿದ್ದಾರೆ. ಅವರಿಗೆ ಉಸಿರುಗಟ್ಟುವ ವಾತಾವರಣವಿದೆ. ಮತ್ತೆ ನೀವು? ಸುಮ್ಮನೆ ಕೂತಿದ್ದೀರಿ. ಈ ದೇಶಕ್ಕೆ ನಿಮ್ಮ ಮೌನ ಬೇಡ. ನಿಮ್ಮ ಉತ್ತರ ಬೇಕು