ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ರೈಲು ದುರಂತ ‌| ಬಿಹಾರದ 19 ಪ್ರಯಾಣಿಕರು ನಾಪತ್ತೆ: ವಿಪತ್ತು ನಿರ್ವಹಣಾ ಇಲಾಖೆ

Published 8 ಜೂನ್ 2023, 8:10 IST
Last Updated 8 ಜೂನ್ 2023, 8:10 IST
ಅಕ್ಷರ ಗಾತ್ರ

ಪಾಟ್ನಾ: ಕೋರೊಮಂಡಲ್‌ ರೈಲಿನಲ್ಲಿ ಪ್ರಯಾಣಿಸಿದ ಬಿಹಾರದ 19 ಮಂದಿ ಒಡಿಶಾದ ಬಾಲೇಶ್ವರದ ಸಮೀಪ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಕಾಣೆಯಾಗಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ(ಡಿಎಂಡಿ) ತಿಳಿಸಿದೆ.

ಜೂನ್‌ 2ರಂದು ಒಡಿಶಾದ ಬಾಲೇಶ್ವರದಲ್ಲಿ ಕೋರೊಮಂಡಲ್‌ ಎಕ್ಸ್‌ಪ್ರೆಸ್‌, ಬೆಂಗಳೂರು–ಹೌರಾ ಎಕ್ಸ್‌ಪ್ರೆಸ್‌ ಸೂಪರ್‌ಫಾಸ್ಟ್‌ ಹಾಗೂ ಗೂಡ್ಸ್‌ ರೈಲುಗಳ ನಡುವೆ ಅಪಘಾತ ನಡೆದಿತ್ತು. ಅಪಘಾತದಲ್ಲಿ 288 ಮಂದಿ ಸಾವಿಗೀಡಾಗಿದ್ದಾರೆ.

‘ಕಾಣೆಯಾದರವಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ನಾಲ್ವರು, ದರ್ಭಾಂಗ, ಮುಜಾಫರ್‌ಪುರ, ವೆಸ್ಟ್ ಚಂಪಾರಣ್‌, ಸಮಸ್ತಿಪುರ್ ಜಿಲ್ಲೆಗಳಿಂದ ಎರಡು ಮಂದಿ ಹಾಗೂ ಸಿತಾಮರ್ಹಿ, ಪಾಟ್ನಾ, ಗಯಾ, ಪೂರ್ಣಿಯಾ, ಶೇಖ್‌ಪುರ, ಸಿವಾನ್, ಬೇಗುಸರಾಯ್ ಜಿಲ್ಲೆಗಳಿಂದ ಒಂದೊಂದು ಮಂದಿ ಕಾಣೆಯಾಗಿದ್ದಾರೆ‘ ಎಂದು ಡಿಎಂಡಿ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳ ತಂಡವೊಂದನ್ನು ಒಡಿಶಾಕ್ಕೆ ಕಳುಹಿಸಲಾಗಿದ್ದು, ಅಪರಿಚಿತ ಶವಗಳ ಗುರುತನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ತಂಡವು ಒಡಿಶಾ ಸರ್ಕಾರದ ಅಧಿಕಾರಿಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ರಾಜ್ಯದ 12 ಮಂದಿಯ ಡಿಎನ್‌ಎ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಅದನ್ನು ಅಪರಿಚಿತ ಮೃತದೇಹಗಳ ಮಾದರಿಗಳೊಂದಿಗೆ ತಾಳೆ ಹಾಕಲಾಗುತ್ತದೆ‘ ‌ ಎಂದು ಡಿಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಸುಮಾರು 50 ಮಂದಿ ರೈಲು ದುರಂತದಲ್ಲಿ ಸಾವಿಗೀಡಾದರೆ, 43 ಜನರಿಗೆ ತೀವ್ರ ಗಾಯಗಳಾಗಿವೆ‘ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT