ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರೇಷನ್ ಕಪ್‌: ಚೋಪ್ರಾ, ಜೇನಾ ನೇರ ಫೈನಲ್‌ಗೆ

Published 13 ಮೇ 2024, 18:07 IST
Last Updated 13 ಮೇ 2024, 18:07 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಭಾರತದ ಸ್ಟಾರ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಅವರು ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ನಲ್ಲಿ ಫೈನಲ್‌ಗೆ ನೇರ ಪ್ರವೇಶ ಪಡೆದಿದ್ದಾರೆ.

ಒಲಿಂಪಿಕ್‌ ಚಾಂಪಿಯನ್‌ ಚೋಪ್ರಾ ಮೂರು ವರ್ಷದ ಬಳಿಕ ತವರಿನಲ್ಲಿ ನಡೆಯುವ ಟೂರ್ನಿಯೊಂದಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಚೋಪ್ರಾ ಮತ್ತು ಜೇನಾ ಅವರು ಈಗಾಗಲೇ ಹಲವು ಬಾರಿ ಅರ್ಹತಾ ಮಟ್ಟ (75 ಮೀಟರ್‌) ದಾಟಿರುವುದರಿಂದ ಅವರು ನೇರ ಫೈನಲ್‌ಗೆ ಕಣಕ್ಕೆ ಇಳಿಯಲಿದ್ದಾರೆ.

ಕಳೆದ ವಾರ ನಡೆದ ಡೈಮಂಡ್‌ ಲೀಗ್‌ನ ದೋಹಾ ಲೆಗ್‌ನಲ್ಲಿ ಚೋಪ್ರಾ 88.36 ಮೀ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದಿದ್ದರು. ಏಷ್ಯನ್ ಕ್ರೀಡಾಕೂಟದ ಬೆಳ್ಳಿ ವಿಜೇತ ಜೇನಾ ಈ ಬಾರಿ ಡೈಮಂಡ್‌ ಲೀಗ್‌ಗೆ ಚೊಚ್ಚಲ ಪ್ರವೇಶ ಮಾಡಿ, 76.31 ಮೀ ದೂರ ಎಸೆದಿದ್ದರು.

2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಪಡೆದಿದ್ದ ಕರ್ನಾಟಕದ ಡಿ.ಪಿ. ಮನು ಅವರೂ ನೇರ ಫೈನಲ್‌ ಪ್ರವೇಶ ಪಡೆದಿದ್ದಾರೆ.

ಮಂಗಳವಾರ ಜಾವೆಲಿನ್‌ ಥ್ರೋ ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದೆ. ಬುಧವಾರ ಫೈನಲ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT