ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಾಮಿ ಗಂಗಾ: 280 ಯೋಜನೆಗಳು ಪೂರ್ಣ– ಕೇಂದ್ರ

Published 8 ಫೆಬ್ರುವರಿ 2024, 16:05 IST
Last Updated 8 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ನವದೆಹಲಿ: ನಮಾಮಿ ಗಂಗಾ ಕಾರ್ಯಕ್ರಮದಡಿ ₹38,438 ಕೋಟಿ ವೆಚ್ಚದಲ್ಲಿ ಕೈಗೊಂಡ 457 ಯೋಜನೆಗಳ ಪೈಕಿ 2023ರ, ಡಿಸೆಂಬರ್ 31ರ ಹೊತ್ತಿಗೆ 280 ಯೋಜನೆಗಳು ಪೂರ್ಣಗೊಂಡಿವೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಗುರುವಾರ ತಿಳಿಸಿದೆ.

ಶುದ್ಧೀಕರಿಸದ ಜನವಸತಿ ಪ್ರದೇಶದ ಮತ್ತು ಕಾರ್ಖಾನೆಗಳ ಕಲುಷಿತ ನೀರು ನದಿಗೆ ತಲುಪುವುದನ್ನು ತಡೆಯಲು ಒಳಚರಂಡಿ ನಿರ್ವಹಣಾ ಮೂಲಸೌಕರ್ಯವನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಜಲ ಶಕ್ತಿ ಖಾತೆಯ ರಾಜ್ಯ ಸಚಿವ ಬಿಶ್ವೇಶ್ವರ ತುಡು ಹೇಳಿದ್ದಾರೆ.

ನಿತ್ಯ 6,208.12 ಮಿಲಿಯನ್ ಲೀಟರ್(MLD) ನೀರು ಸಂಸ್ಕರಣಾ ಘಟಕದ(ಎಸ್‌ಟಿಪಿ) ರಚನೆ ಮತ್ತು ಪುನರ್ವಸತಿಗಾಗಿ ₹31,575 ಕೋಟಿ ವೆಚ್ಚದಲ್ಲಿ 198 ಒಳಚರಂಡಿ ಮೂಲಸೌಕರ್ಯ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ, 111 ಒಳಚರಂಡಿ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡಿವೆ. ಇದರ ಪರಿಣಾಮವಾಗಿ 2,844 ಎಂಎಲ್‌ಡಿ ಒಳಚರಂಡಿ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕ ಸೃಷ್ಟಿ ಮತ್ತು ಪುನರ್ವಸತಿಯಾಗಿದೆ ಎಂದು ಅವರು ಹೇಳಿದ್ದಾರೆ.

ನಮಾಮಿ ಗಂಗಾ ಕಾರ್ಯಕ್ರಮದಡಿ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ಗೆ (ಎನ್‌ಎಂಸಿಜಿ) 2014-15ರಲ್ಲಿ ಯೋಜನೆ ಆರಂಭವಾದಾಗಿನಿಂದ 2022–23ರವರೆಗೆ ಕೇಂದ್ರ ಸರ್ಕಾರವು ₹14,329 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಈವರೆಗೆ ಎನ್‌ಎಂಸಿಜಿ ₹13,735 ಕೊಟಿ ಹಣವನ್ನು ಬಿಡುಗಡೆ ಮಾಡಿದ್ದು, ಅದನ್ನು ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಂಗಾ ನದಿ ಮತ್ತು ಅದರ ಉಪನದಿಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ನಮಾಮಿ ಗಂಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT