ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಕಂಚಿನ ಪ್ರತಿಮೆ ಕುಸಿದ ಘಟನೆಗೆ ಸಂಬಂಧಿಸಿದಂತೆ ನಿರ್ಮಾಣ ಸಲಹೆಗಾರ ಚೇತನ್ ಪಾಟೀಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಿಲ್ಪಿ ಜಯದೀಪ್ ಅಪ್ಟೆ ತಲೆಮರೆಸಿಕೊಂಡಿದ್ದಾರೆ.
ಮಾಲ್ವನ್‌ನ ರಾಜ್‌ಕೋಟ್ ಕೋಟೆಯಲ್ಲಿ ಅನಾವರಣಗೊಳಿಸಿದ್ದ 35 ಅಡಿ ಎತ್ತರದ ಪ್ರತಿಮೆಯು ಕುಸಿದ ಪ್ರಕರಣ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಪಾಟೀಲ್‌ರನ್ನು ಕೊಲ್ಹಾಪುರ ಠಾಣೆ ಪೊಲೀಸರು ಬಂದಿಸಿದ್ದಾರೆ. ಇಬ್ಬರು ಶಂಕಿತರ ಪತ್ತೆಗೆ ಸಿಂಧುದುರ್ಗ, ಕೊಲ್ಹಾಪುರ, ಠಾಣೆಯಲ್ಲಿ ವಿಶೇಷ ತಂಡ ಶೋಧ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.