ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂಜಾ ಖೇಡ್ಕರ್‌ ಸಲ್ಲಿಸಿದ್ದ ಒಂದು ದಾಖಲೆ ನಕಲಿಯಾಗಿರುವ ಸಾಧ್ಯತೆ: ಪೊಲೀಸರ ವರದಿ

Published 4 ಸೆಪ್ಟೆಂಬರ್ 2024, 14:08 IST
Last Updated 4 ಸೆಪ್ಟೆಂಬರ್ 2024, 14:08 IST
ಅಕ್ಷರ ಗಾತ್ರ

ನವದೆಹಲಿ: ಐಎಎಸ್‌ ಪ್ರೊಬೇಷನರಿ ಹುದ್ದೆಯಿಂದ ವಜಾಗೊಂಡಿರುವ ಪೂಜಾ ಖೇಡ್ಕರ್‌ ಅವರು ಅಂಗವಿಕಲರ ಕೋಟಾದಡಿ ಮೀಸಲಾತಿ ಪಡೆಯಲು ಎರಡು ದಾಖಲೆಗಳನ್ನು ಸಲ್ಲಿಸಿದ್ದು, ಅದರಲ್ಲಿ ಒಂದು ದಾಖಲೆ ನಕಲಿಯಾಗಿರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ಹೈಕೋರ್ಟ್‌ಗೆ ತಿಳಿಸಿದ್ದಾರೆ. 

ನಕಲಿ ದಾಖಲೆಗಳನ್ನು ನೀಡಿ ಹಿಂದುಳಿದ ವರ್ಗ ಮತ್ತು ಅಂಗವಿಕಲರ ಕೋಟಾದಡಿ ಮೀಸಲಾತಿ ಪಡೆದಿರುವ ಆರೋಪ ಹೊತ್ತಿದ್ದ ಪೂಜಾ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ  ಪ್ರತಿಕ್ರಿಯೆ ಕೇಳಿದ್ದ ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ವರದಿ ನೀಡಿದ್ದಾರೆ.

‘2022ನೇ ಸಾಲಿನ ಮತ್ತು 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಿಗೆ ಪೂಜಾ ಅವರು ಅಂಗವಿಕಲತೆಯ ಎರಡು ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಬಗ್ಗೆ ತನಿಖೆ ನಡೆಸಿದಾಗ, ಶ್ರವಣ ಮತ್ತು ದೃಷ್ಟಿ ದೋಷ ಸಂಬಂಧಿತವಾಗಿ ಸಲ್ಲಿಸಲಾಗಿದ್ದ ಪ್ರಮಾಣಪತ್ರವನ್ನು ಮಹಾರಾಷ್ಟ್ರದ ಅಹಮದ್‌ನಗರದ ಆರೋಗ್ಯಾಧಿಕಾರಿಯು ನೀಡಿಲ್ಲ ಎಂಬುದು ದೃಢಪಟ್ಟಿದೆ. ಹಾಗಾಗಿ ಪೋರ್ಜರಿ ಮಾಡಿರುವ ಅಥವಾ ನಕಲಿ ದಾಖಲೆ ಸೃಷ್ಟಿಸಿರುವ ಸಾಧ್ಯತೆಗಳು ಇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯುವು ಪ್ರಕರಣದ ವಿಚಾರಣೆಯನ್ನು ಗುರುವಾರ ನಿಗದಿಪಡಿಸಿದೆ. ನಕಲಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿ ಖೇಡ್ಕರ್‌ ಅವರ ಬಂಧನಕ್ಕೆ ನೀಡಿದ್ದ ತಡೆಯನ್ನು ದೆಹಲಿ ಹೈಕೋರ್ಟ್ ಸೆ.5ರವರೆಗೆ ವಿಸ್ತರಿಸಿತ್ತು.

ಜುಲೈ 31ರಂದು ಕೇಂದ್ರ ಲೋಕಸೇವಾ ಆಯೋಗವು ಪೂಜಾ ಖೇಡ್ಕರ್‌ ಅವರ ನೇಮಕಾತಿ ಆದೇಶವನ್ನು ರದ್ದುಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT