ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲವರು ಲಾಭ ಪಡೆಯುತ್ತಿದ್ದರೆ, ಉಳಿದವರು ಹಸಿವಿನಿಂದ ಸಾಯುತ್ತಿದ್ದಾರೆ: ರಾಹುಲ್

Published 13 ಫೆಬ್ರುವರಿ 2024, 8:10 IST
Last Updated 13 ಫೆಬ್ರುವರಿ 2024, 8:10 IST
ಅಕ್ಷರ ಗಾತ್ರ

ಉದಯಪುರ (ಸುರ್ಗುಜಾ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ವ್ಯವಸ್ಥೆಯಿಂದ ಕೆಲವರು ಮಾತ್ರ ಲಾಭ ಪಡೆಯುತ್ತಿದ್ದಾರೆ ಮತ್ತು ಉಳಿದವರೆಲ್ಲರೂ ತೆರಿಗೆ ಪಾವತಿಸಿ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಂದೊಮ್ಮೆ, ಜನರು ಯಾವುದಾದರೂ ವಿರುದ್ಧ ಧ್ವನಿ ಎತ್ತಿದರೆ, ಅವರು ಇಡಿ, ಸಿಬಿಐ ಮತ್ತು ಐಟಿ ಇಲಾಖೆಯಿಂದ ಕ್ರಮ ಎದುರಿಸಬೇಕಾಗುತ್ತದೆ ಎಂದು ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ ಉದಯಪುರದಲ್ಲಿ ತಮ್ಮ ಭಾರತ ಜೋಡೊ ನ್ಯಾಯ ಯಾತ್ರೆ ಅಂಗವಾಗಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶದಲ್ಲಿ ಹಗಲಿರುಳು ಜನರಿಗೆ ಅನ್ಯಾಯವಾಗುತ್ತಿದ್ದು, ಹಿಂಸಾಚಾರ ನಡೆಯುತ್ತಿದೆ ಮತ್ತು ದ್ವೇಷ ಹರಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬಹುಶಃ ಜನರು ಅದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅದು ಅವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ರಾಹುಲ್ ಹೇಳಿದ್ದಾರೆ.

'ದೇಶದ ನಿಧಿಯಿಂದ ನೀವು ದಿನಕ್ಕೆ ಎಷ್ಟು ಹಣವನ್ನು ಪಡೆಯುತ್ತೀರಿ ಎಂದು ನೀವು ದಿನಕ್ಕೆ ಮೂರು ಬಾರಿ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ನಿಮ್ಮ ದಿನದ ಹೋರಾಟ ಮತ್ತು ಪ್ರಯತ್ನದ ನಂತರ ನೀವು ಎಷ್ಟು ಪ್ರತಿಫಲವನ್ನು ಪಡೆಯುತ್ತೀರಿ ಎಂಬುದನ್ನು ಲೆಕ್ಕ ಹಾಕಿ. 10 ದಿನಗಳ ಕಾಲ ನೀವು ಲೆಕ್ಕ ಹಾಕಿದರೆ, ಒಂದು ವ್ಯವಸ್ಥೆಯಿಂದ ನಿಮ್ಮನ್ನು ಹೇಗೆ ಕೈಬಿಡಲಾಗುತ್ತಿದೆ ಎಂಬುದು ತಿಳಿಯುತ್ತದೆ’ಎಂದು ಅವರು ಆರೋಪಿಸಿದರು.

ಅದಕ್ಕಾಗಿ, ನಮ್ಮ ಭಾರತ ಜೋಡೊ ಯಾತ್ರೆಯಲ್ಲಿ ನ್ಯಾಯ ಸೇರಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT