ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್ ಸಂಘರ್ಷ: 160 ಭಾರತೀಯರನ್ನು ಕರೆತಂದ ವಿಶೇಷ ವಿಮಾನ

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ನಾಗರಿಕರ ಸ್ಥಳಾಂತರ ಪ್ರಕ್ರಿಯೆಯ ಭಾಗವಾಗಿ, ಹಂಗೆರಿಯ ಬುಡಾಪೆಸ್ಟ್‌ನಿಂದ 160 ಭಾರತೀಯರನ್ನು ಕರೆತಂದ ಏರ್‌ ಏಷ್ಯಾ ವಿಶೇಷ ವಿಮಾನವು ಮುಂಜಾನೆ 4.30ರ ಸುಮಾರಿಗೆ ದೆಹಲಿ ತಲುಪಿದೆ.

ಭಾರತಕ್ಕೆ ವಾಪಸ್ ಆದ ಬೆಂಗಳೂರು ಮೂಲದ ವಿದ್ಯಾರ್ಥಿ ಹರಿಷ್ಮಾ, 'ಪರಿಸ್ಥಿತಿ ತುಂಬಾ ಕಠಿಣವಾಗಿತ್ತು. ನಾವು ಮೂರು ದಿನಗಳ ಕಾಲ ಮೆಟ್ರೋ ಸುರಂಗದ ಮೂಲಕ ಸಾಗಿ, ಉಕ್ರೇನ್‌ ಗಡಿ ತಲುಪಿದ್ದೆವು. ಬಳಿಕ ಭಾರತದ ರಾಯಭಾರ ಕಚೇರಿ ನಮ್ಮನ್ನು ವಾಪಸ್‌ ಕರೆತಂದಿದೆ. ಅವರು (ರಾಯಭಾರ ಕಚೇರಿ) ನೀರು, ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟರು. ದೇಶಕ್ಕೆ ವಾಪಸ್ ಆಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ.

ಉಕ್ರೇನ್‌ನ ಸುಮಿ ನಗರದಿಂದ ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿಯನ್ನೂ ಸುರಕ್ಷಿತವಾಗಿ ಸ್ಥಳಾಂತರಿಸದೆ ಬಿಡುವುದಿಲ್ಲ. ಭರವಸೆಯಿಂದ ಇರಿ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ಹೇಳಿತ್ತು.

'ಆಪರೇಷನ್‌ ಗಂಗಾ' ಅಡಿಯಲ್ಲಿ ಇದುವರೆಗೆ 10,000ಕ್ಕೂ ಹೆಚ್ಚು ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. ಹಾರ್ಕಿವ್ ಮತ್ತು ಸುಮಿಯನ್ನು ಹೊರತುಪಡಿಸಿ ಉಳಿದ ನಗರಗಳಲ್ಲಿದ್ದಬಹುತೇಕ ಭಾರತೀಯರನ್ನು ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT